ಹೊಸದಿಗಂತ ವರದಿ ವಿಜಯಪುರ:
ಬಿಜೆಪಿ ರಾಜ್ಯಾಧ್ಯಕ್ಷ ನಳಿನಕುಮಾರ್ ಕಟೀಲ್ ಅವರೊಬ್ಬ ವಿದೂಷಕ ಎಂದು ಮಾಜಿ ಸಿಎಂ ಸಿದ್ದರಾಮಯ್ಯ ಕಿಡಿಕಾರಿದ್ದಾರೆ.
ನಗರದಲ್ಲಿ ಶನಿವಾರ ಸುದ್ದಿಗಾರರೊಂದಿಗೆ ಮಾತನಾಡಿದ ಅವರು, ಗುತ್ತಿಗೆದಾರ ಕೆಂಪಣ್ಣ ಜೊತೆಗೆ ಸಿದ್ದರಾಮಯ್ಯ ಕೂಡ ಜೈಲಿಗೆ ಹೋಗುತ್ತಾರೆ ಎಂದು ಹೇಳಿಕೆ ನೀಡಿದ ನಳಿನಕುಮಾರ್ ಕಟೀಲ್ ಅವರ ಹೇಳಿಕೆಗೆ ಪ್ರತಿಕ್ರಿಯಿಸಿ, ವಿದೂಷಕನ ಮಾತಿಗೆ ಉತ್ತರ ಕೊಡಲ್ಲ ಎಂದರು.
ಅಲ್ಲದೆ ಮೀಸಲಾತಿ 3ಎ, 3ಬಿ ಅವರಿಗೆ ಕಣ್ಣೋರಿಸುವ ತಂತ್ರವಾಗಿದೆ. ಸಂವಿಧಾನದಲ್ಲಿ ಇದಕ್ಕೆ ಮಾನ್ಯತೆ ಇಲ್ಲ. 2ಸಿ, 2ಡಿ ಕುರಿತು ಮಾತನಾಡೊಕೆ ನಾನು ಅಧ್ಯಯನ ಮಾಡಬೇಕು. 3ಎ, 3ಬಿ ಎಲ್ಲ ಜಾತಿಗಳು 2ಸಿ, 2ಡಿಗೆ ಬರುತ್ತವೆಯಾ ?, 2ಸಿ, 2ಡಿ ಅವರಿಗೆ ಏನು ಕೊಡುತ್ತಾರೆ ಗೊತ್ತಾಗಬೇಕಲ್ಲ ಎಂದರು.