13 ತಿಂಗಳ ಗರಿಷ್ಟ ಮಟ್ಟಕ್ಕೆ ತಲುಪಿದೆ ಭಾರತದ ಉತ್ಪಾದನಾ ಸೂಚ್ಯಂಕ

ಹೊಸದಿಗಂತ ಡಿಜಿಟಲ್‌ ಡೆಸ್ಕ್:‌
ಡಿಸೆಂಬರ್‌ ತಿಂಗಳಲ್ಲಿ ಭಾರತದ ಉತ್ಪಾದನಾ ವಲಯವು ಗಣನೀಯ ಬೆಳವಣಿಗೆ ಸಾಧಿಸಿದ್ದು ಕಳೆದ 13 ತಿಂಗಳಲ್ಲಿಯೇ ಗರಿಷ್ಟ ಮಟ್ಟವನ್ನು ತಲುಪಿದೆ. S&P ಗ್ಲೋಬಲ್ ಮಾರ್ಕೆಟ್ ಇಂಟೆಲಿಜೆನ್ಸ್ ಸೋಮವಾರ ಬಿಡುಗಡೆ ಮಾಡಿದ ಅಂಕಿಅಂಶಗಳ ಪ್ರಕಾರ, ಖರೀದಿ ವ್ಯವಸ್ಥಾಪಕ ಸೂಚ್ಯಂಕ (PMI) 57.8 ಕ್ಕೆ ತಲುಪಿದೆ. ಇದು ಕಳೆದ ನವೆಂಬರ್‌ ನಲ್ಲಿ 55.7 ರಷ್ಟಿತ್ತು.

ಔಟ್‌ಪುಟ್ ಬೆಳವಣಿಗೆಯು 13-ತಿಂಗಳ ಗರಿಷ್ಠ ಮಟ್ಟವನ್ನು ಮುಟ್ಟಿದೆ ಮತ್ತು ಹೊಸ ಆರ್ಡರ್‌ ಗಳ ಸಂಖ್ಯೆ ದಿನೇ ದಿನೇ ಏರಿಕೆಯಾಗುತ್ತಿದೆ ಎಂದು ವರದಿ ತಿಳಿಸಿದೆ. S&P ಗ್ಲೋಬಲ್ ಇಂಡಿಯಾ ಮ್ಯಾನುಫ್ಯಾಕ್ಚರಿಂಗ್ ಪರ್ಚೇಸಿಂಗ್ ಮ್ಯಾನೇಜರ್‌ ಸೂಚ್ಯಂಕವನ್ನು 500 ಉತ್ಪಾದನಾ ಕಂಪನಿಗಳ ಸಮೀಕ್ಷೆಯಿಂದ ಪಡೆಯಲಾಗಿದ್ದು ಇದು ಉತ್ಪಾದನಾ ವಲಯದ ಕಾರ್ಯಕ್ಷಮತೆಯನ್ನು ಅಳೆಯುತ್ತದೆ. PMI ಸಮೀಕ್ಷೆಯ ಪ್ರಕಾರ, ಬೇಡಿಕೆಯ ಸ್ಥಿತಿಸ್ಥಾಪಕತ್ವವು ಡಿಸೆಂಬರ್‌ನಲ್ಲಿ ಮಾರಾಟದ ಬೆಳವಣಿಗೆಯನ್ನು ಹೆಚ್ಚಿಸಿದೆ. ಫೆಬ್ರವರಿ 2021ರಿಂದ ಈ ದರವು ವೇಗವಾಗಿ ಹೆಚ್ಚಳವಾಗುತ್ತಿದೆ.

ಈ ಬೆಳವಣಿಗೆಯು 2023ನೇ ವರ್ಷಕ್ಕೆ ಉತ್ತಮ ಆರಂಭವಾಗಿದ್ದು ಜಾಗತಿಕ ಆರ್ಥಿಕ ಹಿಂಜರಿತದ ಭೀತಿಯ ನಡುವೆಯೂ ಭಾರತದ ಉತ್ಪಾದನಾ ವಲಯವು ಸ್ಥಿತಿಸ್ಥಾಪಕತ್ವವನ್ನು ಕಾಯ್ದುಕೊಳ್ಳಲಿದೆ ಎಂಬುದನ್ನು ಸೂಚಿಸುತ್ತದೆ.

ಈ ಸುದ್ದಿಯನ್ನು ಇತರರ ಜೊತೆಗೂ ಹಂಚಿಕೊಳ್ಳಿ

LEAVE A REPLY

Please enter your comment!
Please enter your name here

error: Content is protected !!