ಹೊಸದಿಗಂತ ಡಿಜಿಟಲ್ ಡೆಸ್ಕ್:
ಮೈಸೂರಿನ ಬನ್ನಿಮಂಟಪದ ಅಗ್ನಿಶಾಮಕ ವಸತಿ ಗೃಹದಲ್ಲಿ ಬೆಳ್ಳಂ ಬೆಳಗ್ಗೆ ಗ್ಯಾಸ್ ಸಿಲಿಂಡರ್ ಸ್ಫೋಟವಾಗಿದೆ.
ಸ್ಫೋಟದಿಂದ 10 ಮಂದಿ ಗಾಯಗೊಂಡಿದ್ದಾರೆ. ವಸತಿಗೃಹದ ಮನೆಯೊಂದರಲ್ಲಿ ರಾತ್ರಿಯಿಡೀ ಗ್ಯಾಸ್ ಲೀಕ್ ಆಗಿದೆ.
ತಿಳಿಯದೇ ಹಾಲು ಕಾಯಿಸಲು ಮನೆಯವರು ಲೈಟರ್ ಆನ್ ಮಾಡಿದ ವೇಳೆ ಸಿಲಿಂಡರ್ ಸ್ಫೋಟವಾಗಿದೆ. ಅಕ್ಕಪಕ್ಕದ ಮನೆಯವರೆಗೂ ಬೆಂಕಿ ಹಬ್ಬಿದ್ದು, ಬೆಂಕಿ ನಂದಿಸಲಾಗಿದೆ. ಮಕ್ಕಳು ಸೇರಿ 10 ಮಂದಿ ಗಾಯಗೊಂಡಿದ್ದು, ಒಬ್ಬರಿಗೆ ಗಂಭೀರ ಗಾಯಗಳಾಗಿದ್ದು, ಆಸ್ಪತ್ರೆಗೆ ದಾಖಲಿಸಲಾಗಿದೆ.