ನಾನು ವಿಜಯ್ ಜೋಡಿಯಾಗಬೇಕೆಂಬುದು ನಿಮ್ಮ ಆಸೆ, ಶೀಘ್ರದಲ್ಲೇ ಶುಭ ಸುದ್ದಿ ನೀಡುತ್ತೇವೆಂದ ರಶ್ಮಿಕಾ

ಹೊಸದಿಗಂತ ಡಿಜಿಟಲ್‌ ಡೆಸ್ಕ್:‌

ಸಿನಿಮಾ ಇಂಡಸ್ಟ್ರಿಯಲ್ಲಿ ಸಾಕಷ್ಟು ಜನಪ್ರಿಯತೆ ಗಳಿಸಿದ ಜೋಡಿಗಳಲ್ಲಿ ರಶ್ಮಿಕಾ-ವಿಜಯ್‌ ದೇವರಕೊಂಡ ಜೋಡಿ ಕೂಡ ಒಂದು. ಇಬ್ಬರ ಕೆಮಿಸ್ಟ್ರಿಗೆ ಫ್ಯಾನ್ಸ್‌ ಫಿದಾ ಆಗಿದ್ದಾರೆ.  ಗೀತ ಗೋವಿಂದಂ ಚಿತ್ರದ ಮೂಲಕ ಇವರಿಬ್ಬರಿಗೂ ನೇಮ್-ಫೇಮ್‌ ಎರಡೂ ಸಿಕ್ಕಿದೆ. ಇಬ್ಬರ ಕೆಮಿಸ್ಟ್ರಿ ನೋಡಿ ಇವರಿಬ್ಬರು ಪ್ರೀತಿಯಲ್ಲಿದ್ದಾರೆ ಎಂಬ ಗಾಸಿಪ್‌ ಕೂಡ ಹರಿದಾಡುತ್ತಿದೆ. ಆನಂತರ ಇವರಿಬ್ಬರೂ ಆಗಾಗ್ಗೆ ಜೋಡಿಯಾಗಿ ಕಾಣಿಸಿಕೊಂಡಿದ್ದಾರೆ ಹೊಸ ವರ್ಷದ ಸಂದರ್ಭದಲ್ಲಿ, ರಶ್ಮಿಕಾ ಮತ್ತು ವಿಜಯ್ ದೇವರಕೊಂಡ ಅವರು ಒಂದೇ ಸ್ಥಳದಲ್ಲಿ ತಮ್ಮ ಫೋಟೋಗಳನ್ನು ಹಂಚಿಕೊಂಡಿರುವುದು ಮತ್ತಷ್ಟು ಅನುಮಾನ ಮೂಡಿಸಿದೆ.

ಇತ್ತೀಚೆಗಷ್ಟೇ ನಟಿ ರಶ್ಮಿಕಾ ಅಭಿನಯದ ವಾರಸುಡು ಮತ್ತು ಮಿಷನ್ ಮಜ್ನು ಬಿಡುಗಡೆ ಸಂದರ್ಭದಲ್ಲಿ ಮಾಧ್ಯಮದವರೊಂದಿಗೆ ಹಲವು ವಿಷಯಗಳ ಕುರಿತು ಮಾತನಾಡಿದ್ದಾರೆ.

ಈ ಸಂದರ್ಭದಲ್ಲಿ ರಶ್ಮಿಕಾ ಅವರು, ನಾನು ವಿಜಯ್ ಜೊತೆ ಸಿನಿಮಾದಲ್ಲಿ ನಟಿಸುವುದನ್ನು ನೋಡಲು ಅನೇಕರು ಬಯಸುತ್ತಾರೆ ಆದರೆ, ಸದ್ಯಕ್ಕೆ ವಿಜಯ್ ದೇವರಕೊಂಡ ಅವರ ಜೊತೆ ಯಾವುದೇ ಸಿನಿಮಾ ಮಾಡಿಲ್ಲ,ಅವಕಾಶ ಸಿಕ್ಕರೆ ಖಂಡಿತಾ ಮಾಡುತ್ತೇನೆ ಎಂದು ರಶ್ಮಿಕಾ ವಿಜಯ್ ಜೊತೆ ಸಿನಿಮಾದ ಸುಳಿವು ನೀಡಿದ್ದಾರೆ.

ಖಂಡಿತಾ ವಿಜಯ್ ದೇವರಕೊಂಡ ಜೊತೆ ಸಿನಿಮಾ ಮಾಡ್ತೀನಿ ಅಂದ್ಮೇಲೆ ಗುಡ್ ನ್ಯೂಸ್ ಹೇಳ್ತಾರೆ ಅಂತ ಅಭಿಮಾನಿಗಳು ಕೂಡ ಖುಷಿಯಾಗಿದ್ದಾರೆ. ತಮಿಳಿನ ಹೀರೋ ವಿಜಯ್ ಜೊತೆ ರಶ್ಮಿಕಾ ಅಭಿನಯದ ವಾರಸುಡು ಸಿನಿಮಾ ಸಂಕ್ರಾಂತಿ ಹಬ್ಬದಂದು ರಿಲೀಸ್ ಆಗಲಿದೆ. ಹಾಗಾಗಿ ರಶ್ಮಿಕಾ ಸಿನಿಮಾ ಪ್ರಚಾರದಲ್ಲಿ ಬ್ಯುಸಿಯಾಗಿದ್ದಾರೆ.

ಈ ಸುದ್ದಿಯನ್ನು ಇತರರ ಜೊತೆಗೂ ಹಂಚಿಕೊಳ್ಳಿ

LEAVE A REPLY

Please enter your comment!
Please enter your name here

error: Content is protected !!