ಪ್ರಸನ್ನ ಭಟ್ ಮನೆ ಮಗನಾಗಿದ್ದ: ದುಃಖಿಸಿದ ಸಂಸದ ರಾಘವೇಂದ್ರ

ಹೊಸ ದಿಗಂತ ವರದಿ,ಶಿವಮೊಗ್ಗ:

ರಾಮನಗರದಲ್ಲಿ ಆಕಸ್ಮಿಕವಾಗಿ ನೀರಿಗೆ ಬಿದ್ದು ನಿಧನ ರಾಗಿದ್ದ ಪ್ರಸನ್ನ ಆರ್. ಭಟ್ ಅವರ ಮನೆಗೆ ಸಂಸದ ಬಿ.ವೈ. ರಾಘವೇಂದ್ರ ಭೇಟಿ ನೀಡಿ ಕುಟುಂಬ ವರ್ಗಕ್ಕೆ  ಸಾಂತ್ವಾನ ಹೇಳಿದರು.
ಪ್ರಸನ್ನ ಆರ್. ಭಟ್ ಅವರು ತುಂಬಾ ಸ್ವಾಭಿಮಾನಿ ನನ್ನ ಜೊತೆಗೆ 3 ವರ್ಷಗಳಿಂದ ಛಾಯ ಗ್ರಾಹಕನಾಗಿದ್ದುಕೊಂಡು ನನಗೆ ಅರ್ಧದಷ್ಟು ಕೆಲಸವನ್ನು ಕಡಿಮೆ ಮಾಡುತ್ತಿದ್ದರು. ಅವರ ಅಗಲಿಕೆಯಿಂದ ತುಂಬಾ ದು:ಖವಾಗಿದೆ. ನಮ್ಮ ಕುಟುಂಬಕ್ಕೆ ಮನೆ ಮಗನಾಗಿ ಎಲ್ಲರೂಂದಿಗೂ ತಮ್ಮ ಸಂತೋಷದಿಂದ ಕೆಲಸ ನಿರ್ವಹಿಸುತ್ತಿದ್ದರು ಎಂದರು.
ಏಕಾಏಕಿ ಈ ರೀತಿ ದುರ್ಮರಣ ಹೊಂದಿರುವುದು ನಂಬಲು ಆಸಾಧ್ಯ. ಕುಟುಂಬಸ್ಥರ ದುಃಖದಷ್ಟೇ ನಮಗೂ ಅನುಭಾವ ಆಗಿದೆ.  ಯಾರೇ ಆಗಲೀ ಬೆಂಕಿ, ನೀರು, ಗಾಳಿಯೊಂದಿಗೆ ಹುಡುಗಾಟ ಮಾಡಲು ಹೋಗಬಾರದು. ಇವುಗಳ ಮುಂದೆ ನಾವೆಲ್ಲರೂ ನಶ್ವರ. ಆ ದೇವರು ನಿಮಗೆ ಸಹಿಸಿಕೊಳ್ಳುವ ಶಕ್ತಿ ನೀಡಲೀ ಎಂದು ದೇವರಲ್ಲಿ ಪ್ರಾರ್ಥಿಸಬಹುದು ಎಂದು ಹೇಳಿದರು.
ಇಷ್ಟು ಜನರನ್ನು ಸಂಪಾದನೆ ಮಾಡಿರುವ ಪ್ರಸನ್ನ ಭಟ್  ಹೆಸರಿನಲ್ಲಿ ಹೊಸನಗರದಲ್ಲಿ ಸ್ಮಾರಕ ಅಥವಾ ಸ್ಮರಣಿಕೆ ಬಿಡುಗಡೆ ಮಾಡುವ ಬಗ್ಗೆ ಚಿಂತಿಸುತ್ತಿದು ಹಿಂದೂ ಪರ ಸಂಘಟನೆ ಕಾರ್ಯಕರ್ತರನ್ನು ಭೇಟಿ ಮಾಡಿ ಮಾತನಾಡುತ್ತೇನೆ ಎಂದರು.
ಈ ಸಂದರ್ಭದಲ್ಲಿ ಅಂಬೇಡ್ಕರ್ ನಿಗಮದ ನಿರ್ದೇಶಕ ಎನ್.ಆರ್. ದೇವಾನಂದ್, ಬಿಜೆಪಿ ಪ್ರಮುಖರಾದ ಉಮೇಶ್ ಕಂಚುಗಾರ್, ಎ.ವಿ. ಮಲ್ಲಿಕಾರ್ಜುನ, ಪಪಂ ಉಪಾಧ್ಯಕ್ಷೆ ಕೃಷ್ಣವೇಣಿ, ಗಾಯಿತ್ರಿ ನಾಗರಾಜ್, ಶ್ರೀಪತಿರಾವ್, ಎನ್. ಶ್ರೀ‘ರ ಉಡುಪ, ಯುವರಾಜ್,  ಮಂಡಾಣಿ ಮೋಹನ, ಸುರೇಶ್ ಸ್ವಾಮಿರಾವ್, ಪ್ರಹ್ಲಾದ, ಸುೀಂದ್ರ ಪಂಡಿತ್ ಇದ್ದರು.

ಈ ಸುದ್ದಿಯನ್ನು ಇತರರ ಜೊತೆಗೂ ಹಂಚಿಕೊಳ್ಳಿ

LEAVE A REPLY

Please enter your comment!
Please enter your name here

error: Content is protected !!