ಹೊಸದಿಗಂತ ಡಿಜಿಟಲ್ ಡೆಸ್ಕ್:
ಕೆಜಿಎಫ್ ಸಿನಿಮಾ ಮೂಲಕ ಪ್ಯಾನ್ ಇಂಡಿಯಾ ವೈಡ್ ಅಭಿಮಾನಿಗಳನ್ನು ಸಂಪಾದಿಸಿರುವ ನಟ ರಾಕಿಂಗ್ ಸ್ಟಾರ್ ಬರ್ತಡೇಗೆ ಹತ್ತಿರವಾಗುತ್ತಿದೆ. ರಾಕಿ ಭಾಯ್ ತಮ್ಮ ಅಭಿಮಾನಿಗಳೊಂದಿಗೆ ಪ್ರತಿ ವರ್ಷ ಜನವರಿ 8 ರಂದು ತಮ್ಮ ಹುಟ್ಟುಹಬ್ಬವನ್ನು ಆಚರಿಸುತ್ತಾರೆ.
ಆದರೆ ಈ ವರ್ಷ ಯಶ್ ಅಭಿಮಾನಿಗಳನ್ನು ಭೇಟಿ ಮಾಡಲು ಸಾಧ್ಯವಾಗಿಲ್ಲ. ಈ ಬಗ್ಗೆ ಅಭಿಮಾನಿಗಳಿಗೆ ಬಹಿರಂಗ ಪತ್ರವೊಂದನ್ನು ಬರೆದಿದ್ದಾರೆ. “ವರ್ಷವಿಡೀ ಮತ್ತು ವಿಶೇಷವಾಗಿ ನನ್ನ ಜನ್ಮದಿನದಂದು ನೀವು ತೋರಿಸುವ ಪ್ರೀತಿ ಮತ್ತು ವಾತ್ಸಲ್ಯವು ನನ್ನ ಹೃದಯ ಮುಟ್ಟುತ್ತದೆ. ವರ್ಷವಿಡೀ ನೀವು ತೋರಿದ ಪ್ರೀತಿಯನ್ನು ಮರಳಿ ನೀಡಲು ನನ್ನ ಜನ್ಮದಿನದಂದು ನಾನು ನಿಮ್ಮನ್ನು ಭೇಟಿಯಾಗುತ್ತೇನೆ.
ಆದರೆ ಈ ವರ್ಷ ನನ್ನ ಹುಟ್ಟುಹಬ್ಬದಂದು ನಾನು ಬೆಂಗಳೂರಿನಲ್ಲಿ ಇರುವುದಿಲ್ಲ. ಈ ಬಾರಿ ನಿಮ್ಮನ್ನೆಲ್ಲ ಭೇಟಿ ಮಾಡಲು ಸಾಧ್ಯವಾಗುತ್ತಿಲ್ಲ. ಆದರೆ ನಾನು ಶೀಘ್ರದಲ್ಲೇ ನಿಮ್ಮನ್ನು ಭೇಟಿಯಾಗುತ್ತೇನೆ ಎಂದು ಭರವಸೆ ನೀಡಿದರು. ನಾನು ಬರುವವರೆಗೆ ನಿಮ್ಮ ತಾಳ್ಮೆ ಮತ್ತು ಪ್ರೀತಿಯೇ ನನಗೆ ಆಶೀರ್ವಾದ ಎಂದು ಪತ್ರದಲ್ಲಿ ಬರೆದಿದ್ದಾರೆ.
To my fans,
With love
Yash pic.twitter.com/8Tm4j0Ubzi— Yash (@TheNameIsYash) January 5, 2023