ಹೊಸದಿಗಂತ ಡಿಜಿಟಲ್ ಡೆಸ್ಕ್:
ನರೇಶ್ ಅವರ ಮೂರನೇ ಪತ್ನಿ ರಮ್ಯಾ ರಘುಪತಿ ನರೇಶ್‌ಗೆ ವಿಚ್ಛೇದನ ನೀಡಿಲ್ಲ, ನೀಡೋದು ಇಲ್ಲ ಎಂದು ಹೇಳಿದ್ದಾರೆ. ಇತ್ತೀಚೆಗಷ್ಟೇ ಪವಿತ್ರಾ ಲೋಕೇಶ್ ಹಾಗೂ ನರೇಶ್ ಕಿಸ್ಸಿಂಗ್ ವಿಡಿಯೋ ವೈರಲ್ ಆಗಿದ್ದು, ಸದ್ಯದಲ್ಲೇ ಖುಷಿಯ ವಿಚಾರ ಬಹಿರಂಗಪಡಿಸುತ್ತೇವೆ ಎಂದಿದ್ದರು.
ಈ ಬಗ್ಗೆ ರಮ್ಯಾ ಮಾತನಾಡಿದ್ದು, ನರೇಶ್ ಪವಿತ್ರಾರನ್ನು ಪ್ರೀತಿಸುತ್ತಿರುವ ಬಗ್ಗೆ ನನಗೆ ಗೊತ್ತಿಗೆ, ಅವರ ನನಗೆ ಮೋಸ ಮಾಡಿದ್ದಾರೆ. ಅವರಿಬ್ಬರು ಶೀಘ್ರವೇ ಮದುವೆಯಾಗಲಿದ್ದಾರೆ. ಆದರೆ ನಮ್ಮ ನಡುವೆ ವಿಚ್ಛೇದನ ಆಗಿಲ್ಲ, ಆಗುವುದೂ ಇಲ್ಲ. ನಮ್ಮ ಮಗನಿಗೆ ನಾವು ದೂರ ಆಗುವುದಿಲ್ಲ ಎಂದು ಮಾತು ಕೊಟ್ಟಿದ್ದೇವೆ ಎಂದಿದ್ದಾರೆ.
ನನ್ನ ಜೊತೆಯಲ್ಲಿ, ಒಂದೇ ಮನೆಯಲ್ಲಿ ಇದ್ದಾಗಲೇ ನರೇಶ್ ನನಗೆ ಮೋಸ ಮಾಡಲು ಆರಂಭಿಸಿದ್ದರು. ಅವರ ಶರ್ಟ್‌ನಿಂದ ಲೇಡೀಸ್ ಪರ್ಫ್ಯೂಮ್ ವಾಸನೆ ಬರುತ್ತಿತ್ತು. ಯಾವಾಗಲೂ ಸುಳ್ಳು ಹೇಳುತ್ತಿದ್ದರು. ನಾನು ಕ್ರಾಸ್ ಚೆಕ್ ಮಾಡಿದಾಗಲೆಲ್ಲ ಅದು ಸುಳ್ಳು ಎಂದು ಗೊತ್ತಾಗುತ್ತಿತ್ತು ಎಂದಿದ್ದಾರೆ.
ಸಂದರ್ಶನವೊಂದರಲ್ಲಿ ರಮ್ಯಾ ಗಂಟೆಗಟ್ಟಲೆ ಮಾತನಾಡಿದ್ದು, ಪತಿ ಹೇಗೆಲ್ಲಾ ಮೋಸ ಮಾಡಿದ್ದಾರೆ ಎಂದು ತಿಳಿಸಿದ್ದಾರೆ.