ಹೊಸದಿಗಂತ ಡಿಜಿಟಲ್ ಡೆಸ್ಕ್:
ಬೇಕಾಗುವ ಪದಾರ್ಥಗಳು:
ಕಲ್ಲಂಗಡಿ – 1
ನಿಂಬೆ – 1
ಪುದೀನ ಎಲೆ – ಸ್ವಲ್ಪ
ಜೇನುತುಪ್ಪ – ರುಚಿಗೆ ಸಾಕಷ್ಟು
ಸ್ಟ್ರಾಬೆರಿ – 10
ಐಸ್ ತುಂಡು-ಸ್ವಲ್ಪ
ಮಾಡುವ ವಿಧಾನ:
ಮೊದಲು ಕಲ್ಲಂಗಡಿ ಹಣ್ಣನ್ನು ಬೀಜಗಳಿಲ್ಲದೆ ಸಣ್ಣ ತುಂಡುಗಳಾಗಿ ಕತ್ತರಿಸಿಡಿ. ಅದೇ ರೀತಿ ಸ್ಟ್ರಾಬೆರಿ ಹಣ್ಣನ್ನು ಕೂಡಾ ಸಣ್ಣ ತುಂಡುಗಳಾಗಿ ಕತ್ತರಿಸಿ ಪಕ್ಕಕ್ಕೆ ಇರಿಸಿ. ಈಗ ಬ್ಲೆಂಡರ್ ತೆಗೆದುಕೊಂಡು ಅದರಲ್ಲಿ ಕತ್ತರಿಸಿದ ಕಲ್ಲಂಗಡಿ ಮತ್ತು ಸ್ಟ್ರಾಬೆರಿ ಸೇರಿಸಿ ನುಣ್ಣಗೆ ಬ್ಲೆಂಡ್ ಮಾಡಿ ಒಂದು ಲೋಟಕ್ಕೆ ಹಾಕಿ. ಈಗ ಅದಕ್ಕೆ ನಿಂಬೆರಸ ಮತ್ತು ಜೇನುತುಪ್ಪವನ್ನು ಬೆರೆಸಿ, ನಾಲ್ಕೈದು ಪುದೀನಾ ಎಲೆಗಳನ್ನು ಚೆನ್ನಾಗಿ ಪುಡಿಮಾಡಿ ರಸಕ್ಕೆ ಹಾಕಿ. ತದನಂತರ ಇದಕ್ಕೆ ಐಸ್ ಕ್ಯೂಬ್ ಹಾಕಿ ಕುಡಿದರೆ ತುಂಬಾ ರುಚಿಯಾಗಿರುತ್ತದೆ.
ನಿಮಗೆ ಇನ್ನೂ ತಣ್ಣಗಿರಬೇಕೆಂದರೆ ಐಸ್ ಕ್ಯೂಬ್ ಬಳಸದೆ ಫ್ರೀಜರ್ನಲ್ಲಿಡಿ. ಕಲ್ಲಂಗಡಿ-ಸ್ಟ್ರಾಬೆರಿ ಒಟ್ಟಿಗೆ ಸೇವಿಸುವುದರಿಂದ ದೇಹದ ಉಷ್ಣತೆ ಕಡಿಮೆಯಾಗಿ ದೇಹಕ್ಕೆ ಅಗತ್ಯವಾದ ಪೋಷಕಾಂಶಗಳು ದೊರೆಯುತ್ತವೆ.