ನಾಲ್ಕನೇ ಡೋಸ್ ಈಗಲೇ ಬೇಡ, ಮಾಸ್ಕ್ ಕಡ್ಡಾಯವಾಗಿ ಧರಿಸಿ: ಐಎಂಎ

ಹೊಸದಿಗಂತ ಡಿಜಿಟಲ್ ಡೆಸ್ಕ್:

ಸದ್ಯಕ್ಕೆ ಕೋವಿಡ್ ನಾಲ್ಕನೇ ಡೋಸ್ ತೆಗೆದುಕೊಳ್ಳುವ ಅವಶ್ಯಕತೆ ಇಲ್ಲ ಆದರೆ ಮಾಸ್ಕ್ ಕಡ್ಡಾಯವಾಗಿ ಧರಿಸಿ ಎಂದು ಭಾರತೀಯ ವೈದ್ಯಕೀಯ ಸಂಘದ ಅಧ್ಯಕ್ಷ ಶರದ್ ಕುಮಾರ್ ಅಗರ್ವಾಲ್ ಹೇಳಿದ್ದಾರೆ.

ಕೋವಿಡ್‌ನ ಯಾವ ರೂಪಾಂತರವು ಭಾರತದಲ್ಲಿನ ಸಮುದಾಯದ ಮೇಲೆ ಪರಿಣಾಮ ಬೀರುತ್ತದೆ ಎಂಬುದು ಯಾರಿಗೂ ತಿಳಿದಿಲ್ಲ. ತೀವ್ರವಾಗಿ ಕಂಡು ಬಂದಿಲ್ಲ. ಹಾಗಾಗಿ ಹೆದರುವ ಅವಶ್ಯಕತೆ ಇಲ್ಲ. ಆದರೆ ಜಾಗರೂಕರಾಗಿರಿ ಎಂದಿದ್ದಾರೆ. ಭಾರತೀಯ ಲಸಿಕೆಗಳು ಎಲ್ಲ ರೂಪಾಂತರಗಳ ವಿರುದ್ಧ ಉತ್ತಮವಾದ ಕಾರ್ಯನಿರ್ವಹಿಸುತ್ತಿವೆ ಎಂದಿದ್ದಾರೆ.

ಈ ಸುದ್ದಿಯನ್ನು ಇತರರ ಜೊತೆಗೂ ಹಂಚಿಕೊಳ್ಳಿ

LEAVE A REPLY

Please enter your comment!
Please enter your name here

error: Content is protected !!