ಹೊಸದಿಗಂತ ಡಿಜಿಟಲ್ ಡೆಸ್ಕ್:
ಅಮಿತಾಬ್ ಬಚ್ಚನ್ ಮೊಮ್ಮಗ ಅಗಸ್ತ್ಯ ಹಾಗೂ ಶಾರುಖ್ ಖಾನ್ ಪುತ್ರಿ ಸುಹಾನಾ ಖಾನ್ ಡೇಟಿಂಗ್‌ನಲ್ಲಿದ್ದಾರೆ ಎನ್ನುವ ಸುದ್ದಿ ಎಲ್ಲೆಡೆ ಹಬ್ಬಿತ್ತು.
ಆದರೆ ಇದೀಗ ಹೊಸ ವಿಷಯವೊಂದು ಹೊರಬಿದ್ದಿದೆ. ಅಗಸ್ತ್ಯ ಹಾಗೂ ಸುಹಾನಾ ದಿ ಆರ್ಚೀಸ್ ಸಿನಿಮಾದಲ್ಲಿ ಒಟ್ಟಿಗೇ ನಟಿಸುತ್ತಿದ್ದಾರೆ. ಇಲ್ಲಿ ಇವರಿಬ್ಬರಿಗೆ ಪ್ರೀತಿಯಾಗಿತ್ತು ಎನ್ನಲಾಗಿದೆ. ಆದರೆ ಇದೆಲ್ಲಾ ಪ್ರಚಾರಕ್ಕಾಗಿ ಮಾಡಿದ್ದು ಎನ್ನಲಾಗಿದೆ.
ಮೀಡಿಯಾ ಹಾಗೂ ಸೆಲೆಬ್ರಿಟಿಗಳ ಮನಸೆಳೆಯಲು ಡೇಟಿಂಗ್ ವಿಷಯ ಸೂಕ್ತ ಎಂದು ಡೇಟಿಂಗ್ ಸುದ್ದಿ ಹಬ್ಬಿದೆ ಎನ್ನಲಾಗಿದೆ. ಸೆಟ್‌ನಲ್ಲಿ ಇವರಿಬ್ಬರು ಉತ್ತಮ ಸ್ನೇಹಿತರಂತೆ ಮಾತ್ರ ಇದ್ದರು. ಪ್ರೀತಿ ಪ್ರೇಮ ಇಲ್ಲ ಎನ್ನಲಾಗಿದೆ. ಜಗತ್ತನ್ನು ತಮ್ಮೆಡೆಗೆ ಸೆಳೆಯಲು ಗಿಮಿಕ್ ಮಾಡಲಾಗಿದೆ ಎನ್ನಲಾಗಿದೆ.