ನಾಯಿ ಕಂಡ್ರೆ ಸಿದ್ದರಾಮಯ್ಯಗೆ ಭಯ ಯಾಕೆ? : ಶಾಂತಗೌಡ ಪಾಟೀಲ

ಹೊಸದಿಗಂತ ವರದಿ ಬಾಗಲಕೋಟೆ :

ಮಾಜಿ ಮುಖ್ಯಮಂತ್ರಿ ಸಿದ್ದರಾಮಯ್ಯ ಅವರು ತಮ್ಮ ವರ್ತನೆಯನ್ನು ತಕ್ಷಣ ಸರಿಪಡಿಸಿಕೊಳ್ಳಬೇಕು. ಮುಖ್ಯಮಂತ್ರಿ ವಿರುದ್ದ ನಾಯಿ ಎಂಬ ಪದ ಬಳಕೆ ಮಾಡಿದ್ದು ಸರಿಯಲ್ಲ ಎಂದು ಬಿಜೆಪಿಯ ಜಿಲ್ಲಾ‌ಧ್ಯಕ್ಷ ಶಾಂತಗೌಡ ಪಾಟೀಲ ಖಾರವಾಗಿ ಹೇಳಿದರು.

ನವನಗರದ ಪತ್ರಿಕಾಭವನದಲ್ಲಿ ಶನಿವಾರ ಮಾತನಾಡಿದ ಅವರು, ಮುಖ್ಯಮಂತ್ರಿ ಯವರ ಬಗ್ಗೆ ಸಿದ್ದರಾಮಯ್ಯ ಅವರು ಹಗುರವಾಗಿ ಮಾತನಾಡಬಾರದು. ಸ್ವಾರ್ಥಕ್ಕೆ ನಾಗರಿಕತೆಯನ್ನು ಸಿದ್ದರಾಮಯ್ಯ ಮರೆತಿದ್ದಾರೆ ಎಂದರು.
ನಾಯಿ‌‌ ಒಂದು ನಿಯತ್ತಿನ ಪ್ರಾಣಿಯಾಗಿದೆ. ದೇಶವನ್ನು ಕಾಯುವ ಪಕ್ಷ ಬಿಜೆಪಿ ಯಾಗಿದೆ.ನಾಯಿ‌ಕಂಡರೆ ಸಿದ್ದರಾಮಯ್ಯ ಅವರಿಗೆ ಏಕೆ ಭಯವಾಗುತ್ತಿದೆ. ನಾಯಿ ಕಚ್ಚುತ್ತದೆ ಎಂಬ ಭಯ ಸಿದ್ದರಾಮಯ್ಯ ಅವರಿಗೆ ಕಾಡುತ್ತಿದೆ ಎಂದರು.

ಬೆಳಗಾವಿ ವಿಭಾಗದ ಸಹ ಪ್ರಭಾರಿ ಬಸವರಾಜ ಯಂಕಂಚಿ ಮಾತನಾಡಿ, ಜಲ ವಿವಾದದಲ್ಲಿ ಅನ್ಯಾಯ ಮಾಡಿದ್ದೇ ಕಾಂಗ್ರೆಸ್, ಈಗ ಅದನ್ನು ಎಳೆಎಳೆಯಾಗಿ ಸರಿಪಡಿಸುವ ಕೆಲಸ ಬಿಜೆಪಿ ಮಾಡುತ್ತಿದೆ. ರಾಜ್ಯದ ಮುಖ್ಯಮಂತ್ರಿ ಗಳಾದ ಬಸವರಾಜ ಬೊಮ್ಮಾಯಿಯವರು ನಾಯಿಯಂತೆ ಬಾಲ ಅಡ್ಡಾಡಿಸಿಕೊಂಡು ನಿಂತಿಲ್ಲ. ನಿಯತ್ತಿನಿಂದ ಸಿಎಂ ಅವರು ಕೆಲಸ ಮಾಡುತ್ತಿದ್ದಾರೆ ಎಂದರು.

ಜಿಲ್ಲಾ ವಕ್ತಾರ ಸತ್ಯನಾರಾಯಣ ಹೇಮಾದ್ರಿ ಮಾತನಾಡಿ, ಅಲೆಮಾರಿ ರಾಜಕಾರಣಿ, ಹಿಂದೂ ವಿರೋಧಿ ಸಿದ್ದರಾಮಯ್ಯ 2018 ರಲ್ಲಿ ಸೋತಾಗ ಗೌಡರ ಮನೆಯ ಮುಂದೆ ಕೈಕಟ್ಟಿ, ತಲೆ ಬಾಗಿ ನಿಂತಿದ್ದರು ತಾವು ಯಾವ ಪ್ರಾಣಿಗೆ ಹೋಲಿಸಿಕೊಳ್ಳುತ್ತಾರೆ ಎಂದು‌‌ ಸಿದ್ದರಾಮಯ್ಯ ವರನ ಪ್ರಶ್ನಿಸಿದರು. ಜಿಲ್ಲಾ ಪ್ರಧಾನ ಕಾರ್ಯದರ್ಶಿ ರಾಜು ನಾಯ್ಕರ, ಸಂಗಮೇಶ ಭಾವಿಕಟ್ಟಿ, ರಾಜು ಗಾಣಿಗೇರ ಪತ್ರಿಕಾಗೋಷ್ಠಿ ಯಲ್ಲಿದ್ದರು.

ಈ ಸುದ್ದಿಯನ್ನು ಇತರರ ಜೊತೆಗೂ ಹಂಚಿಕೊಳ್ಳಿ

LEAVE A REPLY

Please enter your comment!
Please enter your name here

error: Content is protected !!