ಹೊಸದಿಗಂತ ಡಿಜಿಟಲ್ ಡೆಸ್ಕ್:
ಭಾರಿ ಭೂಕಂಪದಿಂದ ಇಂಡೋನೇಷ್ಯಾ ತತ್ತರಿಸಿದೆ. ಭೂಕಂಪದ ತೀವ್ರತೆ ರಿಕ್ಟರ್ ಮಾಪಕದಲ್ಲಿ 7.6ರಷ್ಟು ದಾಖಲಾಗಿದ್ದು, ತನಿಂಬರ್ ಪ್ರದೇಶದಲ್ಲಿ ಭೂಕಂಪನದಿಂದಾಗಿ ಕಟ್ಟಡಗಳು ಅಲುಗಾಡಿವೆ. ಭೂಕಂಪದಿಂದಾಗಿ ಹಲವು ಕಟ್ಟಡಗಳು ನೆಲಸಮವಾಗಿದ್ದು, ಇದರಿಂದ ಜನರು ಭಯಭೀತರಾಗಿದ್ದಾರೆ.
ಭೂಕಂಪದಿಂದಾಗಿ ಅಪಾರ ಪ್ರಮಾಣದ ಆಸ್ತಿಪಾಸ್ತಿ ಹಾನಿಯಾಗಿದೆ ಎಂದು ವರದಿಯಾಗಿದೆ. ಮತ್ತೊಂದೆಡೆ, ಅಧಿಕಾರಿಗಳು ಅಲ್ಲಿ ಸುನಾಮಿ ಎಚ್ಚರಿಕೆ ನೀಡಿದ್ದಾರೆ. ಯುರೋಪಿಯನ್ ಭೂಕಂಪನ ಕೇಂದ್ರವು ಇಂಡೋನೇಷ್ಯಾದ ತುವಾನ್ ಪ್ರದೇಶದ ನೈಋತ್ಯಕ್ಕೆ 342 ಕಿ.ಮೀ. ದೂರದಲ್ಲಿದೆ.
ಆಸ್ಟ್ರೇಲಿಯಾ ಮತ್ತು ಟಿಮೋರ್ನಲ್ಲಿ ಕೂಡಾ ಭೂಕಂಪಗಳು ಸಂಭವಿಸಿವೆ ಎಂದು ತೋರುತ್ತದೆ. ಇನ್ನು ಭೂಕಂಪನವಾಗುವ ಸಾಧ್ಯತೆ ಇದೆ ಎಂದು ಎಚ್ಚರಿಕೆ ನೀಡಲಾಗಿದೆ. ಕಟ್ಟಡಗಳಿಂದ ದೂರ ಉಳಿಯುವಂತೆ ಅಧಿಕಾರಿಗಳು ಜನರಿಗೆ ಸೂಚಿಸಿದರು.
Residents in Darwin have woken up to a shock this morning, feeling tremors from a 7.6 magnitude quake which struck Indonesia.
DETAILS: https://t.co/fy4W6vxXPk#9News pic.twitter.com/ShnuBICNJY
— 9News Australia (@9NewsAUS) January 9, 2023