ಹೊಸದಿಗಂತ ಡಿಜಿಟಲ್ ಡೆಸ್ಕ್ :
ಆಫ್ಘಾನಿಸ್ತಾನದಲ್ಲಿ 1 ರಿಂದ 6ನೇ ತರಗತಿವರೆಗೆ ಹೆಣ್ಣು ಮಕ್ಕಳು ಶಿಕ್ಷಣವನ್ನು ಪಡೆಯಬಹುದು ಎಂದು ತಾಲಿಬಾನ್ ಗ್ರೀನ್ ಸಿಗ್ನಲ್ ನೀಡಿದೆ.
ತಾಲಿಬಾನ್‌ನ ಶಿಕ್ಷಣ ಸಚಿವಾಲಯವು ಒಂದರಿಂದ ಆರನೇ ತರಗತಿವರೆಗಿನ ಬಾಲಕಿಯರು ಸರ್ಕಾರಿ ಮತ್ತು ಖಾಸಗಿ ಶಾಲೆಗಳಲ್ಲಿ ತಮ್ಮ ಶಿಕ್ಷಣವನ್ನು ಮುಂದುವರೆಸಬಹುದು ಎಂದು ಪತ್ರದಲ್ಲಿ ಹೇಳಿದೆ.
ಕೆಲವು ದಿನಗಳ ಹಿಂದೆ ತಾಲಿಬಾನ್ ಮಹಿಳಾ ಶಿಕ್ಷಣಕ್ಕೆ (Women Education) ಸಂಪೂರ್ಣ ನಿಷೇಧವನ್ನು ಹೇರಿತ್ತು. ಅದನ್ನು ವಿರೋಧಿಸಿ ಮಹಿಳೆಯರು ಬೀದಿಗಿಳಿದು ಹೋರಾಟ ನಡೆಸಿದ್ದರು.
ಎಲ್ಲೆಡೆ ವಿರೋಧ ವ್ಯಕ್ತಗೊಂಡ ಬೆನ್ನಲ್ಲೇ ತಮ್ಮ ಶಿಕ್ಷಣ ನೀತಿಯನ್ನು ಮರುಪರಿಶೀಲಿಸಿದ ತಾಲಿಬಾನ್ ಸಚಿವಾಲಯ 6ನೇ ತರಗತಿಯೊಳಗಿನ ಹೆಣ್ಣುಮಕ್ಕಳ ಶಿಕ್ಷಣಕ್ಕೆ ಅನುಮತಿ ನೀಡಿದೆ.