2030ರ ಹೊತ್ತಿಗೆ ಅರ್ಧದಷ್ಟು ಮಿಲಿಟರಿ ಶಕ್ತಿ ಕಡಿಮೆ ಮಾಡುವುದಾಗಿ ಘೋಷಿಸಿದ ಶ್ರೀಲಂಕಾ

ಹೊಸದಿಗಂತ ಡಿಜಿಟಲ್‌ ಡೆಸ್ಕ್:‌
ಅರಾಜಕತೆಯಿಂದ, ಆರ್ಥಿಕ ಬಿಕ್ಕಟ್ಟಿನಿಂದ ಕಂಗೆಟ್ಟಿದ್ದ ದ್ವೀಪ ರಾಷ್ಟ್ರ ಶ್ರೀಲಂಕಾ ಈಗ ನಿಧಾನವಾಗಿ ಸುದಾರಿಸಿಕೊಳ್ಳುತ್ತಿದೆ. ಇಲ್ಲಿಯವೆರೆಗೂ ಅದರ ಮಿತ್ರನಾಗಿ ಕಾಣಿಸಿಕೊಂಡಿದ್ದ ಚೀನಾ ಈಗ ಕೈ ಚೆಲ್ಲಿರುವುದರಿಂದ ಜಪಾನ್‌, ಭಾರತ ಸೇರಿದಂತೆ ಇತರ ರಾಷ್ಟ್ರಗಳ ಸಹಯೋಗದಲ್ಲಿ ದೇಶದಲ್ಲಿ ಅಭಿವೃದ್ಧಿ ಕಾರ್ಯವನ್ನು ಕೈಗೊಳ್ಳುವ ಕುರಿತು ಅಲ್ಲಿನ ಸರ್ಕಾರ ಯೋಜಿಸುತ್ತಿದೆ. ಇವುಗಳ ನಡುವೆಯೇ ತನ್ನ ಮಿಲಿಟರಿ ಶಕ್ತಿಯ ಅರ್ಧದಷ್ಟನ್ನು ಇಳಿಕೆ ಮಾಡಲು ಸರ್ಕಾರ ಚಿಂತಿಸಿದೆ.

ನಗದು ಕೊರತೆಯಿಂದ ಬಳಲುತ್ತಿರುವ ಶ್ರೀಲಂಕಾ ಈಗಿರುವ ಮಿಲಿಟರಿ ಶಕ್ತಿಯ ಬದಲಾಗಿ, ಆರ್ಥಿಕವಾಗಿ ಮತ್ತು ಯುದ್ಧತಂತ್ರದ ವಿಷಯದಲ್ಲಿ ಉತ್ತಮವಾಗಿರುವ ಸಮತೋಲಿತ ರಕ್ಷಣಾ ಪಡೆಯನ್ನು ನಿರ್ಮಿಸುವ ದೃಷ್ಟಿಯಿಂದ 2030ರ ಹೊತ್ತಿಗೆ ತನ್ನ ಮಿಲಿಟರಿಯ ಪ್ರಸ್ತುತ ಬಲವನ್ನು ಅರ್ಧಕ್ಕೆ ಇಳಿಸುವ ಯೋಜನೆಗಳನ್ನು ಹಾಕಿಕೊಂಡಿದೆ. ಈ ಹಿಂದೆ ಆರೋಗ್ಯ ರಕ್ಷಣೆ ಮತ್ತು ಶಿಕ್ಷಣಕ್ಕೆ ಮೀಸಲಿಡುವುದಕ್ಕಿಂತ ಮಿಲಿಟರಿ ವೆಚ್ಚ ಹೆಚ್ಚಿದೆ ಎಂಬ ಟೀಕೆಗಳು ಶ್ರೀಲಂಕಾ ವಜೆಟ್ಟಿನ ಕುರಿತು ವ್ಯಕ್ತವಾಗಿದ್ದವು.

ಸೇನೆಯ ಬಲವನ್ನು 2030 ರ ವೇಳೆಗೆ 1,00,000 ಕ್ಕೆ ಇಳಿಸಲಾಗುವುದು, ಮುಂದಿನ ವರ್ಷದ ವೇಳೆಗೆ ಬಲವನ್ನು 135,000 ಕ್ಕೆ ಸೀಮಿತಗೊಳಿಸಲಾಗುವುದು ಎಂದು ರಕ್ಷಣಾ ಸಚಿವಾಲಯ ಹೇಳಿಕೆಯಲ್ಲಿ ತಿಳಿಸಿದೆ. ಪ್ರಸ್ತುತ ಶ್ರೀಲಂಕಾದ ಸೇನಾ ಬಲ 2,00,783 ರಷ್ಟಿದೆ

“ಮುಂಬರುವ ಭದ್ರತಾ ಸವಾಲುಗಳನ್ನು ಎದುರಿಸಲು 2030 ರ ವೇಳೆಗೆ ತಾಂತ್ರಿಕವಾಗಿ ಮತ್ತು ಯುದ್ಧತಂತ್ರದ ಉತ್ತಮ ಮತ್ತು ಸಮತೋಲಿತ ರಕ್ಷಣಾ ಪಡೆಗಳನ್ನು ತರುವುದು ಕಾರ್ಯತಂತ್ರದ ನೀಲನಕ್ಷೆಯ ಒಟ್ಟಾರೆ ಗುರಿಯಾಗಿದೆ” ಎಂದು ರಕ್ಷಣಾ ರಾಜ್ಯ ಸಚಿವ ಪ್ರಮಿತಾ ಬಂಡಾರ ತೆನ್ನಕೋನ್ ಹೇಳಿಕೆಯಲ್ಲಿ ತಿಳಿಸಿದ್ದಾರೆ.

2023 ರ ಬಜೆಟ್‌ನಲ್ಲಿ ಶ್ರೀಲಂಕಾವು ,ಆರೋಗ್ಯ ಮತ್ತು ಶಿಕ್ಷಣಕ್ಕಾಗಿ, ತಲಾ 300 ಶತಕೋಟಿ ರೂಪಾಯಿಗಳನ್ನು ನಿಗದಿಪಡಿಸಿದೆ. 539 ಶತಕೋಟಿ ರೂಪಾಯಿಗಳನ್ನು ರಕ್ಷಣೆಗೆ ಹಂಚಿಕೆ ಮಾಡಿತ್ತು. ಇದು ವ್ಯಾಪಕ ಟೀಕೆಗೆ ಗುರಿಯಾಗಿತ್ತು.

ಇದಲ್ಲದೇ ಫಾರೆಕ್ಸ್ ಕೊರತೆಯಿಂದಾಗಿ, ಇಂಧನ, ರಸಗೊಬ್ಬರಗಳು ಮತ್ತು ಔಷಧಿಗಳು ಸೇರಿದಂತೆ ಪ್ರಮುಖ ಆಮದುಗಳನ್ನು ಪಡೆಯಲು ಶ್ರೀಲಂಕಾ ಪರದಾಡುತ್ತಿದೆ. ಹೀಗಾಗಿ ಭಾರತದ ರುಪಾಯಿಯನ್ನು ವಿನಿಮಯ ಕರೆನ್ಸಿಯಾಗಿ ಬಳಸಲೂ ಕೂಡ ಶ್ರೀಲಂಕಾ ಒಪ್ಪಿಕೊಂಡಿದೆ.

ಈ ಸುದ್ದಿಯನ್ನು ಇತರರ ಜೊತೆಗೂ ಹಂಚಿಕೊಳ್ಳಿ

LEAVE A REPLY

Please enter your comment!
Please enter your name here

error: Content is protected !!