ಹೊಸದಿಗಂತ ಡಿಜಿಟಲ್ ಡೆಸ್ಕ್ :
ರಾಹುಲ್ ಗಾಂಧಿ ಸದ್ಯ ಭಾರತ್ ಜೋಡೋ ಯಾತ್ರೆಯಲ್ಲಿದ್ದು, (Bharat Jodo Yatra) ಈ ವೇಳೆ ಪತ್ರಿಕಾಗೋಷ್ಠಿ ನಡೆಸುವ ವೇಳೆ ತಮ್ಮ ಚಿಕ್ಕಪ್ಪನ ಮಗ ಬಿಜೆಪಿ ಸಂಸದ ವರುಣ್ ಗಾಂಧಿ ಅವರ ಕುರಿತು ಮಾತನಾಡಿದ್ದಾರೆ.
ತಮ್ಮ ಸಿದ್ಧಾಂತ ವರುಣ್ ಗಾಂಧಿಯವರ (Varun Gandhi) ಸಿದ್ಧಾಂತಕ್ಕೆ ಹೊಂದಿಕೆಯಾಗುವುದಿಲ್ಲ ಎಂದು ಹೇಳಿದ್ದಾರೆ.
ನಾನು ಆರ್ಎಸ್ಎಸ್ ಕಚೇರಿಗೆ ಹೋಗಲ್ಲ, ಅದಕ್ಕೂ ಮೊದಲು ನನ್ನ ತಲೆಯನ್ನು ಕತ್ತರಿಸಬೇಕಾಗುತ್ತದೆ. ನನ್ನ ಕುಟುಂಬಕ್ಕೆ ಒಂದು ಸಿದ್ಧಾಂತವಿದೆ, ವರುಣ್ ಇನ್ನೊಂದು ಸಿದ್ಧಾಂತವನ್ನು ಒಪ್ಪಿಕೊಂಡಿದ್ದಾರೆ. ಅವನು ಒಪ್ಪಿಕೊಂಡಿರುವ ಸಿದ್ಧಾಂತವನ್ನು ನಾನು ಒಪ್ಪಿಕೊಳ್ಳಲು ಸಾಧ್ಯವಿಲ್ಲ ಎಂದಿದ್ದಾರೆ .
ವರುಣ್ ಗಾಂಧಿ ಇತ್ತೀಚಿಗೆ ಕೇಂದ್ರ ಸರ್ಕಾರಕ್ಕೆ ಅಸಮಾಧಾನ ಮತ್ತು ಮುಜುಗರಕ್ಕೆ ಕಾರಣವಾಗುವ ರೀತಿಯಲ್ಲಿ ಮಾತನಾಡುತ್ತಿದ್ದು,ಈ ಹಿನ್ನೆಲೆ ಅವರು ಬಿಜೆಪಿ ಬಿಡುತ್ತಾರೆ ಎಂಬ ಮಾತುಗಳು ಕೇಳಿಬರುತ್ತಿದೆ.