ಹೊಸದಿಗಂತ ಡಿಜಿಟಲ್ ಡೆಸ್ಕ್:
ಹೈದರಾಬಾದ್‌ನಲ್ಲಿ ಮಾನಸಿಕ ಅಸ್ವಸ್ಥ ಮಗನನ್ನು ನೋಡಿಕೊಳ್ಳಲು ಗಂಡ,ಅತ್ತೆ ಹಾಗೂ ಮಾವ ನಿರಾಕರಿಸಿದ್ದು, ಅವರ ಮನವೊಲಿಸಲು ವಿಫಲವಾದ ಕಾರಣ ಮನನೊಂದು ಮಹಿಳೆ ಆತ್ಮಹತ್ಯೆ ಮಾಡಿಕೊಂಡಿದ್ದಾರೆ.
ಮೃತ ಮಹಿಳೆಯ ಪೋಷಕರು ದೂರು ನೀಡಿದ್ದು, ಆಕೆಯ ಪತಿ, ಅತ್ತೆ,ಮಾವ, ನಾದಿನಿ ಹಾಗೂ ನಾದಿನಿ ಪತಿ ವಿರುದ್ಧ ದೂರು ದಾಖಲಿಸಲಾಗಿದೆ. ಶ್ರೀಧರ್,ಪತ್ನಿ ಸ್ವಾತಿ ಅವರ ಮಾನಸಿಕ ಅಸ್ವಸ್ಥ ಮಗನನ್ನು ಅನಾಥಾಶ್ರಮಕ್ಕೆ ಕಳಿಸುವಂತೆ ಎಲ್ಲರೂ ಒತ್ತಡ ಹೇರಿದ್ದರು. ಆದರೆ ಸ್ವಾತಿ ಇದಕ್ಕೆ ಒಪ್ಪಿಗೆ ನೀಡಿರಲಿಲ್ಲ.
ಮನೆಯಲ್ಲಿಯೇ ನೋಡಿಕೊಳ್ಳೋಣ ಎಂದಿದ್ದರು. ಚಿಕಿತ್ಸೆಗೆ ಹಣ ನೀಡಲು ನಿರಾಕರಿಸಿದ್ದರು. ಇದರಿಂದ ಮನನೊಂದ ಸ್ವಾತಿ 22ನೇ ಮಹಡಿಗೆ ಹೋಗಿ ಹಾರಿದ್ದಾರೆ. ಒಂದನೇ ಮಹಡಿಗೆ ಬಿದ್ದಿದ್ದಾರೆ. ತಕ್ಷಣವೇ ಮೃತಪಟ್ಟಿದ್ದಾರೆ.