ಹೊಸದಿಗಂತ ಡಿಜಿಟಲ್ ಡೆಸ್ಕ್ :
ಗ್ಯಾಂಬಿಯಾದ ಉಪಾಧ್ಯಕ್ಷ ಬದರಾ ಅಲಿಯು ಜೂಫ್ ಅವರು ಅನಾರೋಗ್ಯದಿಂದ ಭಾರತದಲ್ಲಿ ನಿಧನರಾಗಿದ್ದಾರೆ ಎಂದು ಅಧ್ಯಕ್ಷ ಆಡಮಾ ಬಾರೋ ತಿಳಿಸಿದ್ದಾರೆ.
ಜೂಫ್, (65) 2022 ರಲ್ಲಿ ಪಶ್ಚಿಮ ಆಫ್ರಿಕಾದ ದೇಶದ ಉಪಾಧ್ಯಕ್ಷರಾಗಿ ನೇಮಕಗೊಂಡರು.ಅವರು ಈ ಹಿಂದೆ ಶಿಕ್ಷಣ ಸಚಿವರಾಗಿ ಸೇವೆ ಸಲ್ಲಿಸಿದ್ದರು.
ಆನಾರೋಗ್ಯದಿಂದ ನಿಧನರಾದರು ಎಂದು ಬಾರೋ ಟ್ವಿಟರ್ನಲ್ಲಿ ತಿಳಿಸಿದ್ದಾರೆ.
ಅವರು ವೈದ್ಯಕೀಯ ಚಿಕಿತ್ಸೆ ಪಡೆಯಲು ಮೂರು ವಾರಗಳ ಹಿಂದೆ ಗ್ಯಾಂಬಿಯಾ ತೊರೆದಿದ್ದರು ಎಂದು ತಿಳಿದು ಬಂದಿದೆ.