ಗ್ಯಾಂಬಿಯಾದ ಉಪಾಧ್ಯಕ್ಷ ಬದರಾ ಅಲಿಯು ಜೂಫ್ ನಿಧನ

ಹೊಸದಿಗಂತ ಡಿಜಿಟಲ್‌ ಡೆಸ್ಕ್‌ :

ಗ್ಯಾಂಬಿಯಾದ ಉಪಾಧ್ಯಕ್ಷ ಬದರಾ ಅಲಿಯು ಜೂಫ್ ಅವರು ಅನಾರೋಗ್ಯದಿಂದ ಭಾರತದಲ್ಲಿ ನಿಧನರಾಗಿದ್ದಾರೆ ಎಂದು ಅಧ್ಯಕ್ಷ ಆಡಮಾ ಬಾರೋ ತಿಳಿಸಿದ್ದಾರೆ.

ಜೂಫ್, (65) 2022 ರಲ್ಲಿ ಪಶ್ಚಿಮ ಆಫ್ರಿಕಾದ ದೇಶದ ಉಪಾಧ್ಯಕ್ಷರಾಗಿ ನೇಮಕಗೊಂಡರು.ಅವರು ಈ ಹಿಂದೆ ಶಿಕ್ಷಣ ಸಚಿವರಾಗಿ ಸೇವೆ ಸಲ್ಲಿಸಿದ್ದರು.

ಆನಾರೋಗ್ಯದಿಂದ ನಿಧನರಾದರು ಎಂದು ಬಾರೋ ಟ್ವಿಟರ್‌ನಲ್ಲಿ ತಿಳಿಸಿದ್ದಾರೆ.
ಅವರು ವೈದ್ಯಕೀಯ ಚಿಕಿತ್ಸೆ ಪಡೆಯಲು ಮೂರು ವಾರಗಳ ಹಿಂದೆ ಗ್ಯಾಂಬಿಯಾ ತೊರೆದಿದ್ದರು ಎಂದು ತಿಳಿದು ಬಂದಿದೆ.

ಈ ಸುದ್ದಿಯನ್ನು ಇತರರ ಜೊತೆಗೂ ಹಂಚಿಕೊಳ್ಳಿ

LEAVE A REPLY

Please enter your comment!
Please enter your name here

error: Content is protected !!