ಹೊಸದಿಗಂತ ಡಿಜಿಟಲ್ ಡೆಸ್ಕ್:
ಬಾಲಿವುಡ್ ಜೋಡಿಗಳು ತಮ್ಮ ಮಕ್ಕಳ ಫೋಟೊವನ್ನು ರಿವೀಲ್ ಮಾಡೋದಕ್ಕೆ ಇಷ್ಟಪಡೋದಿಲ್ಲ. ಇವರು ಹೀಗೆ ಯಾಕೆ ಮಾಡ್ತಾರೆ ಅನ್ನೋದು ಜನ ಸಾಮಾನ್ಯರ ಪ್ರಶ್ನೆ. ಅನುಷ್ಕಾ-ವಿರಾಟ್, ಕರೀನಾ-ಸೈಫ್, ಆಲಿಯಾ-ರಣ್ಬೀರ್ ತಮ್ಮ ಮಕ್ಕಳ ಫೋಟೊಗಳನ್ನು ಹಂಚಿಕೊಳ್ಳೋದಕ್ಕೆ ಇಷ್ಟಪಟ್ಟಿರಲಿಲ್ಲ.
ಇದೀಗ ಸೋನಂ ಕಪೂರ್ ಈ ಬಗ್ಗೆ ಮಾತನಾಡಿದ್ದು, ಮಕ್ಕಳ ಫೊಟೊ ರಿವೀಲ್ ಮಾಡೋದಿಲ್ಲ. ಇದಕ್ಕೆ ಕಾರಣ ಇದೆ. ಇದು ಮಕ್ಕಳ ಬೆಳವಣಿಗೆಗೆ ಹಾನಿಯುಂಟು ಮಾಡುತ್ತದೆ. ಅವರ ಫೋಟೊ, ವಿಡಿಯೋ ಬಗ್ಗೆ ಅವರೇ ನಿರ್ಧರಿಸಲಿ. ಅಲ್ಲಿಯವರೆಗೂ ಅವರನ್ನು ತೋರಿಸೋದಿಲ್ಲ ಎಂದಿದ್ದಾರೆ.