ಹೊಸ ದಿಗಂತ ಡಿಜಿಟಲ್ ಡೆಸ್ಕ್:
ಮಂಗಳೂರು ಅಂತಾರಾಷ್ಟ್ರೀಯ ವಿಮಾನ ನಿಲ್ದಾಣದಲ್ಲಿ ಜ.1ರಿಂದ 18ರ ವರೆಗೆ ಕಸ್ಟಮ್ಸ್ ಅಧಿಕಾರಿಗಳು ನಡೆಸಿದ ಕಾರ್ಯಾಚರಣೆಯಲ್ಲಿ ತೆರಿಗೆ ವಂಚಿಸಿ ಸಾಗಾಟ ಮಾಡುತ್ತಿದ್ದ ರೂ.2 ಕೋಟಿ 1 ಲಕ್ಷದ 69,800 ಮೌಲ್ಯದ 3ಕೆಜಿ 677 ಗ್ರಾಂ ಚಿನ್ನವನ್ನು ವಶಪಡಿಸಿಕೊಂಡಿದ್ದಾರೆ.
ಪ್ರಕರಣದಲ್ಲಿ 8 ಮಂದಿಯನ್ನು ವಶಕ್ಕೆ ಪಡೆಯಲಾಗಿತ್ತು.
ಈ ಪ್ರಯಾಣಿಕರು ದುಬೈ ಮತ್ತು ಅಬುಧಾಬಿಯಿಂದ ವಿಮಾನದಲ್ಲಿ ಬಂದಿಳಿದಿದ್ದು, ಚಿನ್ನವನ್ನು ಪೇಸ್ಟ್ ರೂಪದಲ್ಲಿ ಘನ ಗಮ್ನೊಂದಿಗೆ ಬೆರೆಸಿ ಪ್ಯಾಕೆಟ್ಗಳಾಗಿ ಮಾಡಿ, ಗುದನಾಳದಲ್ಲಿ ಮರೆಮಾಡಿ, ಟ್ರಾಲಿ ಬ್ಯಾಗ್ ನಲ್ಲಿ ಮರೆ ಮಾಚಿ , ಬನಿಯನ್ ನಲ್ಲಿ ಅಡಗಿಸಿಟ್ಟು ಕಳ್ಳ ಸಾಗಾಣಿಕೆ ಮಾಡುತ್ತಿದ್ದರು ಎಂದು ಕಸ್ಟಮ್ಸ್ ಅಧಿಕಾರಿಗಳು ತಿಳಿಸಿದ್ದಾರೆ.
ಓರ್ವ ಪ್ರಯಾಣಿಕನಿಂದ 3 ಲಕ್ಷಕ್ಕೂ ಹೆಚ್ಚು ಬೆಲೆ ಬಾಳುವ ಈ ಸಿಗರೇಟ್ಗಳನ್ನೂ ವಶಪಡಿಸಿಕೊಳ್ಳಲಾಗಿದೆ.