Thursday, February 9, 2023

Latest Posts

ಭಾರತದ ಚರಿತ್ರೆಯಲ್ಲಿ ಕಂದಾಯ ಇಲಾಖೆ ಕ್ರಾಂತಿಕಾರಿ ಹೆಜ್ಜೆ: ಆರ್.ಅಶೋಕ್

ಹೊಸ ದಿಗಂತ ವರದಿ, ಕಲಬುರಗಿ:

ಭಾರತದ ಚರಿತ್ರೆಯಲ್ಲಿ ಕಂದಾಯ ಇಲಾಖೆ ವತಿಯಿಂದ ತಾಂಡಾಗಳನ್ನು ಇದೀಗ ಕಂದಾಯ ಗ್ರಾಮಗಳನ್ನಾಗಿ ಮಾಡಿ, ಹಕ್ಕು ಪತ್ರ ವಿತರಣೆ ಮಾಡಿದ್ದು, ಇತಿಹಾಸದಲ್ಲಿ ವಿಶೇಷ ಸ್ಥಾನಮಾನ ಹೊಂದಿದೆ ಎಂದು ಕಂದಾಯ ಸಚಿವ ಆರ್.ಅಶೋಕ್ ಹೇಳಿದರು.

ಜಿಲ್ಲೆಯ ಸೇಡಂ ತಾಲೂಕಿನ ಮಳಖೇಡದಲ್ಲಿ ಕಂದಾಯ ಇಲಾಖೆಯ ವತಿಯಿಂದ ಆಯೋಜಿಸಲಾಗಿದ್ದ ಹಕ್ಕು ಪತ್ರ ವಿತರಣೆ ಕಾಯ೯ಕ್ರಮದಲ್ಲಿ ಪ್ರಾಸ್ತಾವಿಕವಾಗಿ ಮಾತನಾಡಿದ ಅವರು, ರಾಜ್ಯದ ಲಂಬಾಣಿ ಜನರು ವಾಸಿಸುವ ಸ್ಥಳವನ್ನು ಅವರಿಗೆ ಒದಗಿಸಿ,ಕಂದಾಯ ಇಲಾಖೆಯೂ ಸಬ್ ರಿಜಿಸ್ಟ್ರಾರ್ ಕಚೇರಿಯಲ್ಲಿ ನೊಂದಣಿ ಮಾಡಿಕೊಡಲಾಗಿದೆ ಎಂದರು.

ಒಂದೇ ಸ್ಥಳದಲ್ಲಿ 52,072 ತಾಂಡಾಗಳ ನಿವಾಸಿಗಳಿಗೆ ಹಕ್ಕು ಪತ್ರ ವಿತರಣೆ ಮಾಡಿದ್ದು,ಇದೀಗ ಗಿನ್ನಿಸ್ ದಾಖಲೆಯಲ್ಲಿ ಉಲ್ಲೇಖವಾಗಿ,ದಾಖಲೆಯ ಪ್ರಮಾಣ ಪತ್ರ ದೊರಕಿದೆ ಎಂದರು. ಕಳೆದ 75 ವಷ೯ಗಳಲ್ಲಿ ಆಗದಂತಹ ಕೆಲಸವನ್ನು ನಮ್ಮ ಮೋದಿ ನೇತೃತ್ವದ ಡಬಲ್ ಇಂಜಿನ್ ಸಕಾ೯ರ ಮಾಡಿ ತೋರಿಸಿದೆ ಎಂದರು.

ಹಕ್ಕು ಪತ್ರವು ಜೀವನದ ಆಸರೆಯಾಗಿದ್ದು, ಆ ಆಸರೆಯಲ್ಲಿ ಕುಟುಂಬದ ಅಣ್ಣ ತಮ್ಮಂದಿರು ಜೀವನ ನಡೆಸಲು ಈ ಹಕ್ಕು ಪತ್ರ ಆಸರಗಯಾಗಲಿದೆ ಎಂದರು.ಈ ಐತಿಹಾಸಿಕ ದಾಖಲೆಯ ಹಕ್ಕು ಪತ್ರ ವಿತರಣೆಯನ್ನು ನಮ್ಮ ನೆಚ್ಚಿನ ಪ್ರಧಾನಿ ನರೇಂದ್ರ ಮೋದಿಯವರು,ನಾಡಿನ ಮುಖ್ಯಮಂತ್ರಿ ಬೊಮ್ಮಾಯಿ ಆಗಮಿಸಿದ್ದು, ನಮಗೆ ಹೆಮ್ಮೆಯ ವಿಷಯವಾಗಿದೆ ಎಂದರು.

ಇಡೀ ಕನಾ೯ಟಕದ ಲಂಬಾಣಿ, ಹಟ್ಟಿ, ಆಡಿ,ಅಲೆಮಾರಿ ಸೇರಿದಂತೆ ಒಟ್ಟು ರಾಜ್ಯಾದ್ಯಂತ 1,50,000 ಹಕ್ಕು ಪತ್ರ ನೀಡುತ್ತಿದ್ದೇವೆ.ಮೊದಲ ಹಂತದಲ್ಲಿ ಕಲಬುರಗಿ ಜಿಲ್ಲೆಯಲ್ಲಿ ಐದು ಜಿಲ್ಲೆಗಳ 52.072 ನಿವಾಸಿಗಳಿಗೆ ಹಕ್ಕು ಪತ್ರ ವಿತರಣೆ ಆಗುತ್ತಿದೆ.ಎರಡನೇ ಹಂತದಲ್ಲಿ ದಾವಣಗೆರೆ ಜಿಲ್ಲೆಯಲ್ಲಿ ನಡೆಯಲಿದೆ ಎಂದು ಹೇಳಿದರು.

ಈ ಸುದ್ದಿ ಇತರರೊಂದಿಗೂ ಹಂಚಿಕೊಳ್ಳಿ

Latest Posts

Don't Miss

error: Content is protected !!