ಹೊಸದಿಗಂತ ಡಿಜಿಟಲ್ ಡೆಸ್ಕ್:
ಲೈಂಗಿಕ ಕಿರುಕುಳದ (MeToo allegations) ಆರೋಪ ಹೊತ್ತಿರುವ ಕುಸ್ತಿ ಸಂಸ್ಥೆಯ ಮುಖ್ಯಸ್ಥ ಬ್ರಿಜ್ ಭೂಷಣ್ ಶರಣ್ ಸಿಂಗ್ ವಿರುದ್ಧ ಇದೀಗ ನಿರಂತರ ಪ್ರತಿಭಟನೆ ನಡೆಯುತ್ತಿದೆ.
ಇದರ ನಡುವೆ ಬ್ರಿಜ್ ನಾನು ಹೇಳಿಕೆ ನೀಡಿದರೆ ಸುನಾಮಿ ಉಂಟಾಗುತ್ತದೆ. ನಾನು ಯಾರ ಸಹಾಯಾರ್ಥವಾಗಿ ಇಲ್ಲಿಲ್ಲ. ನಾನು ಚುನಾಯಿತ ಪ್ರತಿನಿಧಿ ಎಂದಿದ್ದಾರೆ.
ಬ್ರಿಜ್ ವಿರುದ್ಧ ಕುಸ್ತಿಪಟುಗಳು #MeToo ಆರೋಪ ಹೊರಿಸಿದ್ದು, ತಮಗೆ ಜೀವ ಭಯವಿದೆ ಎಂದಿದ್ದಾರೆ. ಮೀಟೂ ಆರೋಪ ಹೊಂದಿರುವ ಬ್ರಿಜ್ ಅವರನ್ನು ಕುಸ್ತಿ ಸಂಸ್ಥೆಯ ಮುಖ್ಯಸ್ಥ ಸ್ಥಾನದಿಂದ ತಕ್ಷಣವೇ ವಜಾಗೊಳಿಸಬೇಕೆಂದು ಕುಸ್ತಿಪಟುಗಳು ಒತ್ತಾಯಿಸುತ್ತಿದ್ದಾರೆ. ಆದ್ರೆ ರಾಜೀನಾಮೆ ನೀಡುವ ಪ್ರಶ್ನೆಯೇ ಇಲ್ಲ. ನಾನು ಪ್ರಧಾನಿ ಕಾರ್ಯಾಲಯ ಮತ್ತು ಗೃಹ ಸಚಿವರೊಂದಿಗೆ ಮಾತನಾಡಿಲ್ಲ ಎಂದು ಬ್ರಿಜ್ ಹೇಳಿದ್ದಾರೆ.