ವಿಮಾನಪ್ರಯಾಣಿಕರಿಗೆ ಗುಡ್ ನ್ಯೂಸ್: ಇನ್ಮುಂದೆ ಟಿಕೆಟ್‌ ಕ್ಯಾನ್ಸಲ್‌ ಆದರೆ ಶೇ.75ರಷ್ಟು ಹಣ ವಾಪಸ್‌!

ಹೊಸದಿಗಂತ ಡಿಜಿಟಲ್ ಡೆಸ್ಕ್:

ಇನ್ಮುಂದೆ ವಿಮಾನದಲ್ಲಿ ಪ್ರಯಾಣಿಕರಿಗೆ ದೇಶೀಯ ಹಾಗೂ ಅಂತಾರಾಷ್ಟ್ರೀಯ ಪ್ರಯಾಣದಲ್ಲಿ ಅನುಕೂಲ ಕಲ್ಪಿಸಲು ನಾಗರಿಕ ವಿಮಾನಯಾನ ನಿರ್ದೇಶನಾಲಯ(ಡಿಜಿಸಿಎ) ಮುಂದಾಗಿದ್ದು, ಬುಧವಾರ ನಾಗರಿಕ ವಿಮಾನಯಾನ ಅಗತ್ಯತೆ(ಸಿಎಆರ್) ನಿಯಮಗಳಿಗೆ ತಿದ್ದುಪಡಿ ತಂದಿದೆ.

ತಿದ್ದುಪಡಿ ಪ್ರಕಾರ, CAR ನಲ್ಲಿ, ವಿಳಂಬ, ರದ್ದತಿ ಮತ್ತು ಫ್ಲೈಯಿಂಗ್ ಕ್ಲಾಸ್ ಅನೈಚ್ಛಿಕವಾಗಿ ಡೌನ್‌ಗ್ರೇಡ್ ಮಾಡುವಿಕೆಯಿಂದ ತೊಂದರೆಗೊಳಗಾದ ಪ್ರಯಾಣಿಕರಿಗೆ ಮರುಪಾವತಿ ಮಾಡಲು ವಿಮಾನಯಾನ ಸಂಸ್ಥೆಗಳಿಗೆ ಸೂಚಿಸಲಾಗುತ್ತದೆ.

ಕೆಳದರ್ಜೆಗೆ ಇಳಿಸಲ್ಪಟ್ಟ ಮತ್ತು ಅವರು ಪಾವತಿಸಿದ ದರಕ್ಕಿಂತ ಕಡಿಮೆ ತರಗತಿಯಲ್ಲಿ ಸಾಗಿಸುವ ಪ್ರಯಾಣಿಕರಿಗೆ ವಿಮಾನಯಾನ ಸಂಸ್ಥೆಗಳಿಂದ ಮರು ಪಾವತಿಸಲು ಅನುವು ಮಾಡಿಕೊಡುತ್ತದೆ.ಇನ್ನು ದೇಶೀಯ ಪ್ರಯಾಣಿಕರಿಗೆ, ತೆರಿಗೆ ಸೇರಿದಂತೆ ಟಿಕೆಟ್‌ ನ ಶೇಕಡ 75 ರಷ್ಟು ಹಣವನ್ನು ಪರಿಷ್ಕೃತ ಸಿಎಆರ್ ಅಡಿಯಲ್ಲಿ ವಿಮಾನಯಾನ ಸಂಸ್ಥೆಯು ಮರುಪಾವತಿಸಬೇಕಾಗುತ್ತದೆ.

ವಿಮಾನ ಹತ್ತಲು ನಿರಾಕರಿಸಿದರೆ, ವಿಮಾನಗಳ ಹಾರಾಟ ರದ್ದಾದರೆ ಹಾಗೂ ವಿಮಾನಗಳ ಹಾರಾಟ ವಿಳಂಬವಾದರೆ ತೆರಿಗೆ ಸೇರಿ ಒಟ್ಟು ಟಿಕೆಟ್‌ ದರದ ಶೇ.75ರಷ್ಟು ಹಣವನ್ನು ಪ್ರಯಾಣಿಕರಿಗೆ ಮರುಪಾವತಿ ಮಾಡುವುದು ಹೊಸ ನಿಯಮದಲ್ಲಿದೆ. ಇದರಿಂದಾಗಿ, ಪ್ರಯಾಣಿಕರಿಗೆ ಹೆಚ್ಚಿನ ಪ್ರಮಾಣದಲ್ಲಿ ಅನುಕೂಲವಾಗಲಿದೆ.

ಇನ್ನು ಮುಂದೆ ಅಂತಾರಾಷ್ಟ್ರೀಯ ವಲಯಕ್ಕೆ 1500 ಕಿಮೀ ಅಥವಾ ಅದಕ್ಕಿಂತ ಕಡಿಮೆ ದೂರದ ವಿಮಾನಗಳಿಗೆ ತೆರಿಗೆ ಸೇರಿದಂತೆ ಟಿಕೆಟ್‌ನ ವೆಚ್ಚದ ಶೇಕಡ 30 ರಷ್ಟು, 1500 ಕಿಮೀ ನಿಂದ 3500 ಕಿಮೀ ನಡುವಿನ ವಿಮಾನಗಳಿಗೆ ತೆರಿಗೆ ಸೇರಿದಂತೆ ಟಿಕೆಟ್‌ನ ವೆಚ್ಚದ ಶೇಕಡ 50 ರಷ್ಟು, 3500 ಕಿಲೋಮೀಟರ್‌ ಗಿಂತ ಹೆಚ್ಚಿನ ವಿಮಾನಗಳಿಗೆ ತೆರಿಗೆ ಸೇರಿದಂತೆ ಟಿಕೆಟ್‌ನ ವೆಚ್ಚದ 75 ಪ್ರತಿಶತ ಇರಲಿದೆ ಎಂದು ಹೇಳಲಾಗಿದೆ.

ಈ ಸುದ್ದಿಯನ್ನು ಇತರರ ಜೊತೆಗೂ ಹಂಚಿಕೊಳ್ಳಿ

LEAVE A REPLY

Please enter your comment!
Please enter your name here

error: Content is protected !!