ಹೊಸದಿಗಂತ ಡಿಜಿಟಲ್ ಡೆಸ್ಕ್:
ವಿಜಯ್ ದಳಪತಿ ಹಾಗೂ ಸಂಗೀತಾ ದಾಂಪತ್ಯದಲ್ಲಿ ಬಿರುಕು ಮೂಡೋದಕ್ಕೆ ನಟಿ ಕೀರ್ತಿ ಸುರೇಶ್ ಕಾರಣ ಎನ್ನುವ ಸುದ್ದಿ ಎಲ್ಲೆಡೆ ವೈರಲ್ ಆಗುತ್ತಿದೆ. ಈ ಮಧ್ಯೆ ಕೀರ್ತಿ ಸುರೇಶ್ ಮದುವೆಯಾಗುತ್ತಿದ್ದಾರೆ ಎನ್ನುವ ಸುದ್ದಿ ಸಾಮಾಜಿಕ ಜಾಲತಾಣದಲ್ಲಿ ವೈರಲ್ ಆಗಿದೆ. ಆದರೆ ಇವರು ಮದುವೆ ಆಗ್ತಿರೋದು ವಿಜಯ್ ದಳಪತಿ ಅವರನ್ನಲ್ಲ. ತಮ್ಮ ಬಾಲ್ಯದ ಗೆಳೆಯನನ್ನು.
ಹೌದು, ಕೀರ್ತಿ ಸುರೇಶ್ ತಮ್ಮ ಬಾಲ್ಯದ ಗೆಳೆಯ ಬ್ಯುಸಿನೆಸ್ಮೆನ್ ಜತೆ 10 ವರ್ಷದಿಂದ ರಿಲೇಶನ್ಶಿಪ್ನಲ್ಲಿದ್ದು, ಇದೀಗ ಕಲ್ಯಾಣಕ್ಕೆ ಎಲ್ಲವೂ ತಯಾರಿಯಾಗುತ್ತಿದೆ ಎನ್ನಲಾಗಿದೆ.
ಆದರೆ ಕೀರ್ತಿ ತಾಯಿ ಈ ಸುದ್ದಿಯನ್ನು ಜರಿದಿದ್ದಾರೆ. ಕೀರ್ತಿ ಮದುವೆ ಆಗುವ ಸಂದರ್ಭದಲ್ಲಿ ನಾವೇ ತಿಳಿಸುತ್ತೇವೆ, ಅವರು ಯಾರ ದಾಂಪತ್ಯವನ್ನೂ ಮುರಿದಿಲ್ಲ. ಇದೆಲ್ಲಾ ಗಾಳಿ ಸುದ್ದಿ ಎಂದು ಮದುವೆ ವಿಷಯವನ್ನು ತಳ್ಳಿಹಾಕಿದ್ದಾರೆ.