ಹೊಸದಿಗಂತ ಡಿಜಿಟಲ್ ಡೆಸ್ಕ್:
ಸತ್ತರೂ ಬಿಜೆಪಿ ಜೊತೆ ಮೈತ್ರಿ ಇಲ್ಲ ಎಂದು ಬಿಹಾರ ಸಿಎಂ ನಿತೀಶ್ ಕುಮಾರ್ ಹೇಳಿಕೆ ನೀಡಿದ್ದಾರೆ.
ಪ್ರಧಾನಿ ಮೋದಿ ಅವರಿಗೆ ವಿಶ್ವಾಸ ದ್ರೋಹ ಮಾಡಿದರು ಎನ್ನುವ ಬಿಜೆಪಿ ಆರೋಪದ ಬಗ್ಗೆ ಮಾತನಾಡುತ್ತಾ, ಮೈತ್ರಿ ಸುದ್ದಿಯನ್ನು ತಳ್ಳಿಹಾಕಿದರು.
ಮತ್ತೆ ಬಿಜೆಪಿ ಜತೆ ಮೈತ್ರಿ ಪ್ರಶ್ನೆಯೇ ಇಲ್ಲ, ನನ್ನ ಸಾವನ್ನು ಬೇಕಾದ್ರೆ ಸ್ವೀಕರಿಸ್ತೇನೆ ಆದರೆ ಮೈತ್ರಿಯನ್ನಲ್ಲ ಎಂದು ಹೇಳಿದ್ದಾರೆ. ನನಗೆ ಸಿಎಂ ಆಗೋದಕ್ಕೂ ಇಷ್ಟ ಇರಲಿಲ್ಲ, ಬಿಜೆಪಿ ಒತ್ತಾಯಕ್ಕೆ ಸಿಎಂ ಆದೆ ಎಂದಿದ್ದಾರೆ.