ಹೊಸದಿಗಂತ ಡಿಜಿಟಲ್ ಡೆಸ್ಕ್:
ಆಸ್ಟ್ರೇಲಿಯಾದ (Australia) ರಕ್ಷಣಾ ಸಚಿವಾಲಯ ತನ್ನ ಸರ್ಕಾರಿ ಕಚೇರಿಗಳಲ್ಲಿ ಅಳವಡಿಸಲಾಗಿರುವ ಚೀನಾ (China) ನಿರ್ಮಿತ ಭದ್ರತಾ ಕ್ಯಾಮೆರಾಗಳನ್ನು ಸುರಕ್ಷತೆ ದೃಷ್ಟಿಯಿಂದ ತೆರವುಗೊಳಿಸಲು ನಿರ್ಧರಿಸಿದೆ.
ಚೀನಾದ ಕಂಪನಿಗಳಿಗೆ ಬೀಜಿಂಗ್‌ನ ಭದ್ರತಾ ವಲಯ ಗುಪ್ತಚರ ಮಾಹಿತಿ ಹಂಚಿಕೊಳ್ಳುವಂತೆ ಒತ್ತಾಯಿಸಬಹುದು ಎಂಬ ಭಯದಿಂದ ಕಳೆದ ವರ್ಷದ ನವೆಂಬರ್‌ನಲ್ಲಿ ಬ್ರಿಟನ್ ಈ ಕಾರ್ಯಾರಂಭ ಮಾಡಿತು ಎನ್ನಲಾಗಿದೆ.
ಇದೀಗ 200 ಕ್ಕೂ ಹೆಚ್ಚು ಆಸ್ಟ್ರೇಲಿಯನ್ ಸರ್ಕಾರಿ ಕಟ್ಟಡಗಳಲ್ಲಿ ಭದ್ರತಾ ಕ್ಯಾಮೆರಾಗಳನ್ನು ಅಳವಡಿಸಲಾಗಿದೆ. ಆಸ್ಟ್ರೇಲಿಯನ್ ರಕ್ಷಣಾ ಸಚಿವ ರಿಚರ್ಡ್ ಮಾರ್ಲೆಸ್ ಅವರು ರಕ್ಷಣಾ ಇಲಾಖೆಯ ಕಚೇರಿಗಳಲ್ಲಿರುವ ಕ್ಯಾಮೆರಾಗಳನ್ನು ಗುರುತಿಸಿ ಅವುಗಳನ್ನು ತೆರವುಗೊಳಿಸಲು ಕ್ರಮಕೈಗೊಂಡಿದ್ದಾರೆ.
ಕ್ಯಾಮೆರಾಗಳನ್ನು ಚೀನಾದ ಹಿಕ್ವಿಷನ್ ಮತ್ತು ಡಹುವಾ ಕಂಪನಿಗಳು ತಯಾರಿಸಿವೆ. ಇವೆರಡನ್ನೂ ಯುನೈಟೆಡ್ ಸ್ಟೇಟ್ಸ್‌ನಲ್ಲಿ ಕಪ್ಪುಪಟ್ಟಿಗೆ ಸೇರಿಸಲಾಗಿದೆ. ಕಳೆದ ವರ್ಷ ನವೆಂಬರ್‌ನಲ್ಲಿ ಚೀನಾದ ಈ ಕಂಪನಿಗಳು ತಯಾರಿಸಿದ ಸಿಸಿಟಿವಿ ಕ್ಯಾಮೆರಾಗಳ ಆಮದನ್ನು ಅಮೆರಿಕಾ ನಿಷೇಧಿಸಿತು.