ಇದು ಹೆಮ್ಮೆಯ ಕ್ಷಣ: ಮೊದಲ ಬಾರಿಗೆ ರಾಜ್ಯಸಭೆ ಅಧ್ಯಕ್ಷತೆ ವಹಿಸಿದ ಪಿಟಿ ಉಷಾ!

ಹೊಸದಿಗಂತ ಡಿಜಿಟಲ್ ಡೆಸ್ಕ್:

ರಾಜ್ಯಸಭೆಯಲ್ಲಿ (Rajya Sabha) ಮಧ್ಯಾಹ್ನದ ಚರ್ಚೆ ವೇಳೆ ಸಭ್ಯಾಧ್ಯಕ್ಷ, ಉಪರಾಷ್ಟ್ರಪತಿ ಜಗದೀಪ್ ಧನಕರ್ ಅವರ ಅನುಪಸ್ಥಿತಿಯ ಸಮಯದಲ್ಲಿ ಅಥ್ಲೀಟ್ ಕ್ರೀಡಾಪಟು ಪಿ.ಟಿ ಉಷಾ (PT Usha) ಗುರುವಾರ ಕಲಾಪದ ಅಧ್ಯಕ್ಷತೆ ವಹಿಸಿದರು.

ಈ ಬಗ್ಗೆ ಪಿ.ಟಿ ಉಷಾ ಅವರು ತಮ್ಮ ಟ್ವಿಟರ್ ಹ್ಯಾಂಡಲ್‌ನಲ್ಲಿ ಆ ಕ್ಷಣದ ಚಿಕ್ಕ ಕ್ಲಿಪ್​ನ್ನು ಪೋಸ್ಟ್ ಮಾಡಿದ್ದಾರೆ. ತಮ್ಮ ಪೋಸ್ಟ್​ನಲ್ಲಿ ನನಗೆ ಇದು ಒಂದು ಮೈಲಿಗಲ್ಲು ಮತ್ತು ಹೆಮ್ಮೆಯ ಕ್ಷಣ ಎಂದು ವಿವರಿಸಿದ್ದಾರೆ.

ಜುಲೈ 2022 ರಲ್ಲಿ ಕೇಂದ್ರ ಸರಕಾರದಿಂದ ಪಿ.ಟಿ ಉಷಾ ಮೇಲ್ಮನೆಗೆ ನಾಮನಿರ್ದೇಶನಗೊಂಡರು. ನವೆಂಬರ್‌ನಲ್ಲಿ ಅವರು ಭಾರತೀಯ ಒಲಿಂಪಿಕ್ ಅಸೋಸಿಯೇಷನ್ ​​(ಐಒಎ) ಅಧ್ಯಕ್ಷರಾಗಿ ಆಯ್ಕೆಯಾದರು.

ಫ್ರಾಂಕ್ಲಿನ್ ಡಿ. ರೂಸ್‌ವೆಲ್ಟ್ ಅವರು ಹೇಳಿದಂತೆ ‘ಮಹಾ ಶಕ್ತಿಯು ದೊಡ್ಡ ಜವಾಬ್ದಾರಿಯನ್ನು ವಹಿಸಿಕೊಂಡಿದೆ ಎಂದು ನಾನು ರಾಜ್ಯಸಭೆಯ ಅಧಿವೇಶನದ ಅಧ್ಯಕ್ಷತೆ ವಹಿಸಿದ್ದಾಗ ನನಗೆ ಅನಿಸಿತು. ನನ್ನ ಜನರು ನನ್ನ ಮೇಲೆ ಇಟ್ಟಿರುವ ನಂಬಿಕೆಯೊಂದಿಗೆ ನಾನು ಈ ಪ್ರಯಾಣವನ್ನು ಕೈಗೊಂಡಾಗ ಈ ದೊಡ್ಡ ಮೈಲಿಗಲ್ಲುಗಳನ್ನು ಸೃಷ್ಟಿಸಲು ಸಾಧ್ಯವಾಗಿದೆ ಎಂದು ಪಿ.ಟಿ ಉಷಾ ತಮ್ಮ ಟ್ವೀಟ್‌ನಲ್ಲಿ ತಿಳಿಸಿದ್ದಾರೆ. ಅನೇಕರು ಅಭಿನಂದಿಸಿದ್ದಾರೆ.

ಈ ಸುದ್ದಿಯನ್ನು ಇತರರ ಜೊತೆಗೂ ಹಂಚಿಕೊಳ್ಳಿ

LEAVE A REPLY

Please enter your comment!
Please enter your name here

error: Content is protected !!