ಹೊಸದಿಗಂತ ಡಿಜಿಟಲ್ ಡೆಸ್ಕ್:
ಬೆಂಗಳೂರಿನ ಚಾಮರಾಜ ಪೇಟೆಯ ವಿಠಲ್ ನಗರದ ಬಳಿ ಸಿಲಿಂಡರ್ ಸ್ಫೋಟವಾಗಿದೆ.
ಜಿಂಕೆ ಪಾರ್ಕ್ ಬಳಿ 10 ನೇ ಕ್ರಾಸ್ ನ ಫ್ಲವರ್ ಗೋದಾಮಿನಲ್ಲಿ ಬೆಂಕಿ ಅವಘಡ ಸಂಭವಿಸಿದ್ದು, ಬೆಂಕಿಯ ಜ್ವಾಲೆ ಮನೆಯೊಂದಕ್ಕೆ ತಗುಲಿ 3 ಸಿಲಿಂಡರ್ ಸ್ಫೋಟಗೊಂಡಿದೆ.ಕ್ಷಣಾರ್ಧದಲ್ಲಿ ಬೆಂಕಿ ಆವರಿಸಿದ್ದು, ಕೂಡಲೇ ಅಗ್ನಿಶಾಮಕ ದಳದ ಅಧಿಕಾರಿಗಳು ಬೆಂಕಿ ನಂದಿಸಿದ್ದಾರೆ. ಅದೃಷ್ಟವಶಾತ್ ಯಾವುದೇ ಸಾವು ನೋವು ಸಂಭವಿಸಿಲ್ಲ