ಹೊಸದಿಗಂತ ಡಿಜಿಟಲ್ ಡೆಸ್ಕ್ :
ಐಎಎಸ್ ಅಧಿಕಾರಿ ರೋಹಿಣಿ ಸಿಂಧೂರಿ (Rohini Sindhuri) ಹಾಗೂ ಐಪಿಎಸ್ ಡಿ.ರೂಪಾ ಮೌದ್ಗಿಲ್ನ ಡುವಿನ ಆರೋಪ-ಪ್ರತ್ಯಾರೋಪ ಮತ್ತೊಂದು ಹಂತಕ್ಕೆ ಬಂದು ತಲುಪಿದ್ದು, ರೋಹಿಣಿ ಸಿಂಧೂರಿ ರೂಪಾ ವಿರುದ್ಧ ಕೋರ್ಟ್ಗೆ ಅರ್ಜಿ ಸಲ್ಲಿಸಿದ್ದು, ರೂಪಾ ಮೌದ್ಗಿಲ್ ಮಾನಹಾನಿ ಹೇಳಿಕೆ ನೀಡದಂತೆ ನಿರ್ಬಂಧಕಾಜ್ಞೆ ನಿಡಲು ಮನವಿ ಮಾಡಿದ್ದಾರೆ. ಆದ್ರೆ, ಬೆಂಗಳೂರಿನ 74ನೇ ಸಿಟಿ ಸಿವಿಲ್ ಕೋರ್ಟ್ ಕೋರ್ಟ್ ಆದೇಶವನ್ನು ನಾಳೆಗೆ (ಫೆ.22) ಕಾಯ್ದಿರಿಸಿದೆ.
ನಿರ್ಬಂಧಕಾಜ್ಞೆ ನೀಡಬೇಕೇ ಬೇಡವೇ ಎಂದು ನಾಳೆ(ಗುರುವಾರ) ತೀರ್ಪು ಪ್ರಕಟಿಸಲಿದೆ.ಇದರಿಂದ ನ್ಯಾಯಾಲಯ ಏನು ತೀರ್ಪು ನೀಡಲಿದೆ ಎನ್ನುವುದು ಕುತೂಹಲ ಮೂಡಿಸಿದೆ.