ಹೊಸದಿಗಂತ ಡಿಜಿಟಲ್ ಡೆಸ್ಕ್ :
ಮದುವೆ ನಿರಾಕರಿಸಿದ ಯುವತಿಗೆ ಪ್ರೇಮಿಯೊಬ್ಬ 16 ಬಾರಿ ಚಾಕುವಿನಿಂದ ಇರಿದು ಹತ್ಯೆ ಮಾಡಿರುವ ಘಟನೆ ಬೆಂಗಳೂರಿನ ಮುರಗೇಶಪಾಳ್ಯದ ಎನ್ಎಎಲ್ ರಸ್ತೆಯಲ್ಲಿ ಮಂಗಳವಾರ ನಡೆದಿದೆ.
ಲೀಲಾ ಪವಿತ್ರಾ (25) ಮತ್ತು ಆರೋಪಿ ದಿನಕರ್ (28) ಇಬ್ಬರೂ ಪ್ರೀತಿಸುತ್ತಿದ್ದರು, ಆದರೆ ಬೇರೆ ಜಾತಿ ಎನ್ನುವ ಕಾರಣಕ್ಕೆ ಮದುವೆಗೆ ಕುಟುಂಬದ ಅನುಮತಿ ದೊರೆಯದ ಕಾರಣ ಪಾಗಲ್ ಪ್ರೇಮಿ ಯುವತಿಯ ಕುತ್ತಿಗೆ ಮತ್ತು ಹೊಟ್ಟೆಗೆ 16 ಬಾರಿ ಇರಿದಿದ್ದಾನೆ.
ಆಂಧ್ರಪ್ರದೇಶ ಮೂಲದ ಯುವತಿ ಲೀಲಾ ಪವಿತ್ರ ಕೊಲೆಯಾದವರು. ಜೀವನ್ಬಿಮಾನಗರ ಠಾಣೆ ವ್ಯಾಪ್ತಿಯಲ್ಲಿ ಈ ಪ್ರಕರಣ ದಾಖಲಾಗಿದ್ದು, ಆರೋಪಿಯನ್ನು ಪೊಲೀಸರು ಬಂಧಿಸಿದ್ದಾರೆ.