ಕೊರಿಯನ್ ರಾಯಭಾರಿ ಕಚೇರಿ ಅಧಿಕಾರಿಗಳ ʻನಾಟು ನಾಟುʼ ಹಾಡಿನ ನೃತ್ಯಕ್ಕೆ ರಾಮ್‌ ಚರಣ್ ಫಿದಾ!

ಹೊಸದಿಗಂತ ಡಿಜಿಟಲ್‌ ಡೆಸ್ಕ್:‌ 

ಕಳೆದ ಒಂದು ವರ್ಷದಿಂದ ನಿರ್ದೇಶಕ ರಾಜಮೌಳಿ ಅವರ ಆರ್‌ಆರ್‌ಆರ್ ಚಿತ್ರದ ಬಗ್ಗೆಯೇ ಮಾತುಕತೆ. ಈ ಸಿನಿಮಾ ಸೃಷ್ಟಿಸಿರುವ ಮೇನಿಯಾದಿಂದ ಇನ್ನೂ ಹೊರಬರಲು ಚಿತ್ರಪ್ರೇಮಿಗಳಿಗೆ ಸಾಧ್ಯವಾಗಿಲ್ಲ. ಅದಕ್ಕಾಗಿಯೇ ಈ ಚಿತ್ರವನ್ನು ಮಾರ್ಚ್ 3 ರಂದು ಅಮೆರಿಕದಲ್ಲಿ ಮರು ಬಿಡುಗಡೆ ಮಾಡಲಾಗುತ್ತಿದೆ. ಅಲ್ಲದೇ ಜಪಾನ್ ನಲ್ಲಿ ಈ ಸಿನಿಮಾ ಬಿಡುಗಡೆಯಾಗಿ 100 ದಿನ ಕಳೆದರೂ ಹೌಸ್ ಫುಲ್ ಶೋ ಆಗುತ್ತಿದೆ. ಇತ್ತೀಚೆಗಷ್ಟೇ ಈ ಸಿನಿಮಾ ಮೇನಿಯಾ ದಕ್ಷಿಣ ಕೊರಿಯಾವನ್ನೂ ತಲುಪಿದೆ.

ಇತ್ತೀಚೆಗಷ್ಟೇ ಕೊರಿಯನ್ ರಾಯಭಾರಿ ಕಚೇರಿಯ ಅಧಿಕಾರಿಗಳು ನಾಟು ನಾಟು ಹಾಡಿಗೆ ನೃತ್ಯ ಮಾಡಿದ್ದಾರೆ. ಭಾರತದಲ್ಲಿನ ಕೊರಿಯಾ ರಾಯಭಾರಿ ಕಚೇರಿಯ ಅಧಿಕೃತ ಪ್ರತಿನಿಧಿ ಚಾಂಗ್ ಜೇ ಬಾಕ್ ಮತ್ತು ರಾಯಭಾರಿ ಕಚೇರಿಯಲ್ಲಿ ಕಾರ್ಯನಿರ್ವಹಿಸುತ್ತಿರುವ ಕೊರಿಯನ್ ಮತ್ತು ಭಾರತೀಯ ಸಿಬ್ಬಂದಿ ಸುಮಾರು 50 ಜನರು ನೃತ್ಯ ಮಾಡಿ ನಾಟು ನಾಟು ಹಾಡನ್ನು ಹಂಚಿಕೊಂಡರು. ಈ ವಿಡಿಯೋಗೆ ಪ್ರಧಾನಿ ನರೇಂದ್ರ ಮೋದಿ ಕೂಡ ಪ್ರತಿಕ್ರಿಯೆ ನೀಡಿದ್ದಾರೆ. ಈ ವಿಡಿಯೋ ವೈರಲ್ ಆಗಲಿದೆ.

ಇದೀಗ RRR ಹೀರೋ ರಾಮ್ ಚರಣ್ ಕೂಡ ಈ ಬಗ್ಗೆ ಪ್ರತಿಕ್ರಿಯಿಸಿದ್ದಾರೆ. ಕೂಲೆಸ್ಟ್ ಡ್ಯಾನ್ಸ್ ಮೂವ್ಸ್ ಎವರ್. ನಾಟು ನಾಟು ಹಾಡಿನ ಮೇಲೆ ನೀವು ತೋರುತ್ತಿರುವ ಪ್ರೀತಿಗೆ ನಾನು ಆಭಾರಿಯಾಗಿದ್ದೇನೆ ಎಂದು ಟ್ವೀಟ್ ಮಾಡಿದ್ದಾರೆ.

ಈ ಸುದ್ದಿಯನ್ನು ಇತರರ ಜೊತೆಗೂ ಹಂಚಿಕೊಳ್ಳಿ

LEAVE A REPLY

Please enter your comment!
Please enter your name here

error: Content is protected !!