`ದೆಹಲಿಗಿಂತ ರಾಜಭವನ ಹತ್ತಿರದಲ್ಲಿದೆ’: ತೆಲಂಗಾಣ ಸಿಎಸ್‌ಗೆ ತಮಿಳಿಸೈ ಟಾಂಗ್

ಹೊಸದಿಗಂತ ಡಿಜಿಟಲ್‌ ಡೆಸ್ಕ್:‌ 

ರಾಜ್ಯಪಾಲ ತಮಿಳಿಸೈ ಅವರು ತೆಲಂಗಾಣ ಮುಖ್ಯ ಕಾರ್ಯದರ್ಶಿಗೆ ಟಾಂಗ್‌ ಕೊಟ್ಟಿದ್ದಾರೆ. ‘ರಾಜಭವನ ದೆಹಲಿಗಿಂತ ಹತ್ತಿರದಲ್ಲಿದೆ’ ಎಂದು ಟ್ವೀಟ್‌ ಮಾಡುವ ಮೂಲಕ ಸಿಎಸ್ ಶಾಂತಿಕುಮಾರಿಗೆ ಕೌಂಟರ್ ನೀಡಿದ್ದಾರೆ. ತೆಲಂಗಾಣ ಸಿಎಸ್ ಶಾಂತಿಕುಮಾರಿ ಅವರು ಸುಪ್ರೀಂ ಕೋರ್ಟ್‌ಗೆ ಅರ್ಜಿ ಸಲ್ಲಿಸಿದ್ದು, ರಾಜ್ಯಪಾಲರೊಂದಿಗೆ ಬಾಕಿ ಇರುವ ಮಸೂದೆಗಳನ್ನು ತಕ್ಷಣವೇ ಅಂಗೀಕರಿಸುವಂತೆ ರಾಜ್ಯಪಾಲರಿಗೆ ನಿರ್ದೇಶನ ನೀಡುವಂತೆ ಕೋರಿದ್ದಾರೆ. ಇದಕ್ಕೆ ತಮ್ಮದೇ ಶೈಲಿಯಲ್ಲಿ ಪ್ರತಿಕ್ರಿಯಿಸಿದ ರಾಜ್ಯಪಾಲ ತಮಿಳಿಸೈ, ‘ರಾಜಭವನ ದೆಹಲಿಗಿಂತ ಹತ್ತಿರದಲ್ಲಿದೆ’ ಎಂಬ ಉತ್ತರ ನೀಡಿದ್ದಾರೆ.

ಶಾಂತಿಕುಮಾರಿ ಸಿಎಸ್ ಆಗಿ ಅಧಿಕಾರ ವಹಿಸಿಕೊಂಡ ನಂತರ ಅಧಿಕೃತವಾಗಿ ರಾಜಭವನಕ್ಕೆ ಭೇಟಿ ನೀಡಿಲ್ಲ, ದೂರವಾಣಿಯಲ್ಲಿ ಮಾತನಾಡಲೂ ಸಮಯವಿಲ್ಲ, ಶಿಷ್ಟಾಚಾರ ಪಾಲಿಸಿಲ್ಲ ಎಂದು ಆಕ್ರೋಶ ವ್ಯಕ್ತಪಡಿಸಿದರು. ಕಳೆದ ವಿಧಾನಸಭೆ ಅಧಿವೇಶನದ ನಂತರ ತೆಲಂಗಾಣ ಸರ್ಕಾರ ಮತ್ತು ರಾಜ್ಯಪಾಲ ತಮಿಳಿಸೈ ನಡುವೆ ಸಂಘರ್ಷ ಮುಗಿಯಿತು ಎಂದುಕೊಂಡರೆ, ತೆಲಂಗಾಣ ಸರ್ಕಾರ ಬಾಕಿ ಇರುವ ಬಿಲ್ ಗಳ ಬಗ್ಗೆ ಸುಪ್ರೀಂ ಕೋರ್ಟ್ ನಲ್ಲಿ ಅರ್ಜಿ ಹಾಕುತ್ತಿರುವುದನ್ನು ನೋಡಿದರೆ ಬೂದಿ ಮುಚ್ಚಿದ ಕೆಂಡಂತಿದೆ ಅನಿಸುತ್ತಿದೆ. ತೆಲಂಗಾಣ ಸರ್ಕಾರ ಸುಪ್ರೀಂ ಕೋರ್ಟ್‌ನಲ್ಲಿ ರಿಟ್ ಅರ್ಜಿ ಸಲ್ಲಿಸಿದ ಮರುದಿನವೇ ರಾಜ್ಯಪಾಲರು ಸಿಎಸ್ ಶಾಂತಿಕುಮಾರಿ ವಿರುದ್ಧ ಫೈರ್‌ ಆಗಿದ್ದಾರೆ.

ತೆಲಂಗಾಣ ಮುಖ್ಯ ಕಾರ್ಯದರ್ಶಿಯಾಗಿ ಅಧಿಕಾರ ವಹಿಸಿಕೊಂಡ ಬಳಿಕ ಶಾಂತಿಕುಮಾರಿ ರಾಜಭವನಕ್ಕೆ ಬಂದಿರಲಿಲ್ಲ ಎಂಬುದನ್ನು ಈ ಸಂದರ್ಭದಲ್ಲಿ ರಾಜ್ಯಪಾಲರು ನೆನಪಿಸಿದರು. ಸೌಜನ್ಯದಿಂದ ಕರೆದರೂ ಮರ್ಯಾದೆ ಪಾಲಿಸಿಲ್ಲ. ಯಾವುದೇ ಸಮಸ್ಯೆಗಳ ಬಗ್ಗೆ ಚರ್ಚೆ ಮಾಡದಿದ್ದರೆ ಪರಿಹಾರವಾಗುವುದು ಹೇಗೆ? ಅಂತಹ ಪರಿಹಾರಗಳು ಬೇಕಿಲ್ಲ ಎಂದು ತೆಲಂಗಾಣ ಸರ್ಕಾರವನ್ನು ಉಲ್ಲೇಖಿಸಿ ರಾಜಭವನ ದೆಹಲಿಗಿಂತ ಹತ್ತಿರವಾಗಿದೆ ಎಂದು ತಮಿಳಿಸೈ ಹೇಳಿದ್ದಾರೆ.

ಈ ಸುದ್ದಿಯನ್ನು ಇತರರ ಜೊತೆಗೂ ಹಂಚಿಕೊಳ್ಳಿ

LEAVE A REPLY

Please enter your comment!
Please enter your name here

error: Content is protected !!