60 ವರ್ಷಕ್ಕಿಂತ ಮೇಲ್ಪಟ್ಟ ಒಂದು ಕೋಟಿಗೂ ಹೆಚ್ಚು ಜನರಲ್ಲಿ ಮರೆವಿನ ಕಾಯಿಲೆ!

ಹೊಸದಿಗಂತ ಡಿಜಿಟಲ್ ಡೆಸ್ಕ್:

60ವರ್ಷಕ್ಕಿಂತ ಮೇಲ್ಪಟ್ಟವರಲ್ಲಿ ಸಾಕಷ್ಟು ಆರೋಗ್ಯ ಸಮಸ್ಯೆ ಕಾಡುತ್ತವೆ, ಇದರಲ್ಲಿ ಮರೆವಿನ ಕಾಯಿಲೆಯೂ ಒಂದಾಗಿದೆ. ಭಾರತದಲ್ಲಿ 60 ವರ್ಷಕ್ಕೆ ಮೇಲ್ಪಟ್ಟ ಒಂದು ಕೋಟಿಗಿಂತ ಹೆಚ್ಚು ಮಂದಿಗೆ ಡಿಮೆನ್ಶಿಯಾ ಅಂದರೆ ಮರೆವಿನ ಕಾಯಿಲೆ ಇದೆ ಎಂದು ಸಂಶೋಧನೆಯೊಂದರಿಂದ ತಿಳಿದುಬಂದಿದೆ.

ಆರ್ಟಿಫಿಶಿಯಲ್ ಇಂಟೆಲಿಜೆನ್ಸ್ ಬಳಸಿ ಈ ಅಧ್ಯಯನ ಮಾಡಲಾಗಿದ್ದು, 60 ವರ್ಷ ಮೇಲ್ಪಟ್ಟವರಲ್ಲೇ ಈ ಸಮಸ್ಯೆ ಹೆಚ್ಚಿದೆ. ಅಮೆರಿಕ, ಬ್ರಿಟನ್‌ನಲ್ಲಿ ಮರೆವಿನ ಕಾಯಿಲೆ ದರಕ್ಕೆ ಹೋಲಿಸಿದರೆ ಭಾರತದಲ್ಲಿ ಮರೆವಿನ ಕಾಯಿಲೆ ಹೆಚ್ಚಿದೆ. ವಯೋವೃದ್ಧರು, ಮಹಿಳೆಯರು, ಗ್ರಾಮೀಣ ಪ್ರದೇಶದಲ್ಲಿ ವಾಸಿಸುವವರಲ್ಲಿ ಈ ಸಮಸ್ಯೆ ಹೆಚ್ಚು ಕಾಣಿಸುತ್ತಿದೆ.

ಇಂಗ್ಲೆಂಡ್‌ನ ಸರ್ರೆ ವಿಶ್ವವಿದ್ಯಾಲಯ, ಅಮೆರಿಕದ ಸದರನ್ ಕ್ಯಾಲಿಫೋರ್ನಿಯಾ ವಿಶ್ವವಿದ್ಯಾಲಯ, ಮಿಶಿಗನ್ ವಿಶ್ವವಿದ್ಯಾಲಯ ಹಾಗೂ ಭಾರತದ ಏಮ್ಸ್ ಸಂಸ್ಥೆ ಜಂಟಿಯಾಗಿ ಅಧ್ಯಯನ ನಡೆಸಿದೆ.

ಡಿಮೆನ್ಶಿಯಾ ಲಕ್ಷಣಗಳೇನು?

  • ಎಲ್ಲವನ್ನೂ ಮರೆಯುವುದು, ಜನ, ವಸ್ತು, ದಿನಚರಿ ಪ್ರತಿಯೊಂದು.
  • ಯಾವುದೇ ವಿಷಯದ ಮೇಲೆ ಏಕಾಗ್ರತೆ ಬಾರದೇ ಇರುವುದು
  • ಪ್ರತಿದಿನವೂ ಮಾಡುವ ಅದೇ ಕೆಲಸ ಕಷ್ಟ ಎನಿಸುವುದು, ಎಲ್ಲವನ್ನೂ ಮರೆಯುತ್ತಿದ್ದೇನೆ ಎನಿಸುವುದು
  • ಸರಿಯಾದ ಪದಬಳಕೆ, ಮಾತನಾಡಲು ಕಷ್ಟ ಆಗೋದು.
  • ಸಮಯ ಹಾಗೂ ಜಾಗದ ಬಗ್ಗೆ ಸದಾ ಕನ್ಫ್ಯೂಷನ್
  • ಮೂಡ್ ಆಗಾಗ ಬದಲಾಗುತ್ತಲೇ ಇರುವುದು
  • ಯಾವುದೇ ವಿಷಯದ ಬಗ್ಗೆ ನಿರ್ಣಯ ಕೈಗೊಳ್ಳಲು ಆಗದೇ ಇರುವುದು
  • ವಸ್ತುಗಳನ್ನು ಅದರ ಜಾಗ ಬಿಟ್ಟು ಇನ್ನೆಲ್ಲೋ ಇಟ್ಟು ಮರೆಯುವುದು

ಈ ಸುದ್ದಿಯನ್ನು ಇತರರ ಜೊತೆಗೂ ಹಂಚಿಕೊಳ್ಳಿ

LEAVE A REPLY

Please enter your comment!
Please enter your name here

error: Content is protected !!