ಹೊಸದಿಗಂತ ಡಿಜಿಟಲ್ ಡೆಸ್ಕ್:
ಬಿಸಿಲಿಗೆ ಬೇಗೆಗೆ ಸುಡುತ್ತಿದ್ದ ರಾಜಧಾನಿ ಬೆಂಗಳೂರು ಇಂದು ತಂಪಾಗಿದೆ.
ಬೆಳಗ್ಗಿನಿಂದಲೂ ಚಳಿ ಚಳಿ ವಾತಾವರಣವಿದೆ.
ಬೆಂಗಳೂರಿನಲ್ಲಿ ಮೋಡ ಕವಿದ ವಾತಾವರಣವಿದ್ದು, ಬಿಸಿಲಿನ ಬೇಗೆ ಇಲ್ಲದೆ ಜನ ಖುಷಿಯಾಗಿದ್ದಾರೆ.ಸಮಯ ಕಳೆದಂತೆ ತಾಪಮಾನ ಹೆಚ್ಚಾಗಿ, ಬಿಸಿಲು ಬರುವ ಸಾಧ್ಯತೆ ಇದೆ.
ಇನ್ನು ಕರಾವಳಿ ಕರ್ನಾಟಕ ಭಾಗಗಳಲ್ಲಿ ಮುಂದಿನ 48 ಗಂಟೆ ಉಷ್ಣಗಾಳಿ ಬೀಸಲಿದೆ ಎಂದು ಹವಾಮಾನ ಇಲಾಖೆ ಹೇಳಿದೆ.