ರುಚಿ ಜೊತೆಗೆ ಉಲ್ಲಾಸದಾಯಕ ಆರೋಗ್ಯಕ್ಕೆ ಬೇಕು ಸ್ಟ್ರಾಬೆರಿ ಮಿಲ್ಕ್‌ ಶೇಕ್

ಹೊಸದಿಗಂತ ಡಿಜಿಟಲ್‌ ಡೆಸ್ಕ್ :‌

ಉತ್ತಮ ಆರೋಗ್ಯಕ್ಕೆ ಎಲ್ಲಾ ರೀತಿಯ ತರಕಾರಿ, ಹಣ್ಣುಗಳ ಸೇವನೆ ಅಗತ್ಯ. ಅದರಲ್ಲೂ ಈ ತಂಪು ಪಾನೀಯಗಳು ಆರೋಗ್ಯವನ್ನು ಸ್ಥಿರವಾಗಿಡುವಲ್ಲಿ ಪ್ರಮುಖ ಪಾತ್ರವಹಿಸುತ್ತದೆ. ಸುಡು ಬೇಸಿಗೆಯಲ್ಲಿ ರುಚಿ ಜೊತೆಗೆ ಉಲ್ಲಾಸದಾಯಕ ಆರೋಗ್ಯಕ್ಕಾಗಿ ಮಾಡಿ ಕುಡಿಯಿರಿ ಸ್ಟ್ರಾಬೆರಿ ಮಿಲ್ಕ್‌ ಶೇಕ್‌. ಈ ಶೇಕ್‌ ಅನ್ನು ಮಾಡುವುದು ಹೇಗೆ ಮತ್ತು ಏನೆಲ್ಲಾ ಪದಾರ್ಥಗಳು ಬೇಕು ಇಲ್ಲಿ ತಿಳಿಯಿರಿ.

ಬೇಕಾಗುವ ಪದಾರ್ಥಗಳು:

ಸ್ಟ್ರಾಬೆರಿ
ತಣ್ಣನೆಯ ಹಾಲು
ಸಕ್ಕರೆ

ಮಾಡುವ ವಿಧಾನ:

ಮೊದಲು ಮಿಕ್ಸರ್ ಗೆ ತಾಜಾ ಸ್ಟ್ರಾಬೆರಿಗಳನ್ನು ಹಾಕಿ. ಅದಕ್ಕೆ ಚಮಚ ಸಕ್ಕರೆಯನ್ನು ಹಾಕಿ, ಚೆನ್ನಾಗಿ ರುಬ್ಬಿಕೊಳ್ಳಿ. ನಂತರ, ಸ್ಟ್ರಾಬೆರಿಯಿಂದ ತಯಾರಾದ ಮಿಶ್ರಣವನ್ನು ಒಂದು ಗ್ಲಾಸಿಗೆ ಹಾಕಿ, ಈಗ ಮೇಲಿನಿಂದ ತಣ್ಣನೆಯ ಹಾಲನ್ನು ಸುರಿಯಿರಿ.

ಚಮಚದ ಸಹಾಯದಿಂದ ಚೆನ್ನಾಗಿ ಮಿಶ್ರಣ ಮಾಡಿ. ಇಲ್ಲಿ ನೀವು ಹಾಲು ಸೇರಿಸಿದ ತಕ್ಷಣ ಸ್ಟ್ರಾಬೆರಿ ಮತ್ತು ಹಾಲನ್ನು ಚೆನ್ನಾಗಿ ಮಿಶ್ರಣ ಮಾಡುವುದು ಬಹಳ ಮುಖ್ಯ. ಈಗ ಸ್ಟ್ರಾಬೆರಿ ಮಿಲ್ಕ್‌ ಶೇಕ್‌ ತಯಾರಾಗಿದ್ದು, ಮನೆಯವರೊಂದಿಗೆ ಸವಿಯಬಹುದು.

ಈ ಸುದ್ದಿಯನ್ನು ಇತರರ ಜೊತೆಗೂ ಹಂಚಿಕೊಳ್ಳಿ

LEAVE A REPLY

Please enter your comment!
Please enter your name here

error: Content is protected !!