ರಾಜಧಾನಿ ಬೆಂಗಳೂರಿನಲ್ಲಿ ನಂದಿನಿ ಹಾಲು, ಮೊಸರು ಕೊರತೆ!

ಹೊಸದಿಗಂತ ಡಿಜಿಟಲ್ ಡೆಸ್ಕ್:

ರಾಜಧಾನಿ ಬೆಂಗಳೂರಿನಲ್ಲಿ ನಂದಿನ ಹಾಲು, ಮೊಸರಿನ ಕೊರತೆ ಉಂಟಾಗಿದೆ.
ಉತ್ಪಾದನೆಯಲ್ಲಿ ಕುಸಿತ, ಹೆಚ್ಚಿನ ಬೆಲೆಗೆ ಖಾಸಗಿ ಕಂಪನಿಗಳಿಗೆ ಮಾರಾಟ, ಹುಲ್ಲು, ಬೂಸಾ ಬೆಲೆ ಏರಿಕೆ ಹೀಗೆ ಇತ್ಯಾದಿ ಕಾರಣಗಳಿಂದ ಹಾಲು ಮೊಸರು ಪೂರೈಕೆಯಲ್ಲಿ ವ್ಯತ್ಯಯ ಕಂಡುಬಂದಿದೆ.

ರಾಜಧಾನಿಯಲ್ಲಿ ಪ್ರತಿನಿತ್ಯ 15 ಲಕ್ಷ ಲೀಟರ್ ಹಾಲಿನ ಬೇಡಿಕೆ ಇದೆ, ಆದರೆ ನಿತ್ಯ 13 ಲಕ್ಷ ಲೀಟರ್ ಹಾಲು ಮಾತ್ರ ಪೂರೈಕೆಯಾಗುತ್ತಿದೆ. ಈ ಹಿಂದೆ ನಿತ್ಯ 15-16 ಲಕ್ಷ ಲೀಟರ್ ಹಾಲು ಸಂಗ್ರಹವಾಗುತ್ತಿತ್ತು. ಇದರಲ್ಲಿ ಹಾಲಿನ ಪೌಡರ್ ಹಾಗೂ ಚೀಸ್ ತಯಾರಿಕೆಗೆ ತಲಾ ಒಂದೊಂದು ಲಕ್ಷ ಲೀಟರ್ ಹಾಲು ಬಳಕೆಯಾಗುತ್ತಿತ್ತು. ಇದೀಗ ಕಳೆದ 20 ದಿನದಿಂದ ಹಾಲಿನ ಕೊರತೆ ಎದುರಾಗಿದೆ. ಹಾಲಿನ ಪೌಡರ್ ಹಾಗೂ ಚೀಸ್ ಉತ್ಪಾದನೆಯನ್ನು ಸಧ್ಯಕ್ಕೆ ನಿಲ್ಲಿಸಲಾಗಿದೆ.

ಈ ಸುದ್ದಿಯನ್ನು ಇತರರ ಜೊತೆಗೂ ಹಂಚಿಕೊಳ್ಳಿ

LEAVE A REPLY

Please enter your comment!
Please enter your name here

error: Content is protected !!