ಜಿನೀವಾದಲ್ಲಿ ಮೋಡಿ ಮಾಡಿದ ಕಾಂತಾರ: ಖುಷಿ ಹಂಚಿಕೊಂಡ ರಿಷಬ್‌!

ಹೊಸದಿಗಂತ ಡಿಜಿಟಲ್ ಡೆಸ್ಕ್:

ವಿಶ್ವಸಂಸ್ಥೆಯ ಮಾನವ ಹಕ್ಕುಗಳ ಮಂಡಳಿ (UNHRC) ಅಧಿವೇಶನದಲ್ಲಿ ಈಗಾಗಲೇ ಕನ್ನಡದಲ್ಲಿಯೇ ಮಾತನಾಡಿ ಎಲ್ಲರ ಮನಸ್ಸು ಗೆದ್ದ ರಿಷಬ್‌ ಶೆಟ್ಟಿ ಇದೀಗ ಮತ್ತೊಂದು ಮೈಲುಗಲ್ಲು ಸಾಧಿಸಿದ್ದಾರೆ.

ರಿಷಬ್‌ ಶೆಟ್ಟಿ ನಟನೆ, ನಿರ್ದೇಶನದ ಕಾಂತಾರ ಸಿನಿಮಾ ಜಿನೀವಾದಲ್ಲಿ ಪ್ರದರ್ಶನಗೊಂಡಿದೆ. ಈ ಕುರಿತ ಫೋಟೊಗಳನ್ನು ಸೋಷಿಯಲ್‌ ಮೀಡಿಯಾದಲ್ಲಿ ಹಂಚಿಕೊಂಡಿದ್ದಾರೆ.

ಪೋಸ್ಟ್‌ನಲ್ಲಿ ʻʻಜಿನೀವಾದಲ್ಲಿ ನಮ್ಮ ಕಾಂತಾರ ಸಿನಿಮಾದ ವಿಶೇಷ ಪ್ರದರ್ಶನ.ಪ್ರಪಂಚದಾದಿ ಇರುವ ಗಣ್ಯಾತಿ ಗಣ್ಯರು ನಮ್ಮ ಕಾಂತಾರ ಸಿನಿಮಾ ನೋಡಿ ಅದರ ಸಂದೇಶವನ್ನು ಗ್ರಹಿಸಿ ಪ್ರಶಂಸಿದ ಪರಿ ಶ್ಲಾಘನೀಯ, ಇದಕ್ಕೆ ಕಾರಣರಾದ ಹೆಮ್ಮೆಯ ಕನ್ನಡಿಗರಿಗೆ ಅಭಿನಂದನೆಗಳು ಎಂದು ಬರೆದುಕೊಂಡಿದ್ದಾರೆ.

ಈ ಸುದ್ದಿಯನ್ನು ಇತರರ ಜೊತೆಗೂ ಹಂಚಿಕೊಳ್ಳಿ

LEAVE A REPLY

Please enter your comment!
Please enter your name here

error: Content is protected !!