ಡೊನಾಲ್ಡ್ ಟ್ರಂಪ್ ಅರೆಸ್ಟ್, ನಾನು ನಿರಪರಾಧಿ ಎಂದ ಅಮೆರಿಕದ ಮಾಜಿ ಅಧ್ಯಕ್ಷ!

ಹೊಸದಿಗಂತ ಡಿಜಿಟಲ್ ಡೆಸ್ಕ್:

ನೀಲಿಚಿತ್ರ ನಟಿಗೆ ಹಣ ವರ್ಗಾವಣೆ ಪ್ರಕರಣದಲ್ಲಿ ಅಮೆರಿಕದ ಮಾಜಿ ಅಧ್ಯಕ್ಷ ಡೊನಾಲ್ಡ್ ಟ್ರಂಪ್‌ರನ್ನು ಬಂಧಿಸಲಾಗಿದೆ.

2016 ರಲ್ಲಿ ಪ್ರಚಾರದ ಸಮಯದಲ್ಲಿ ನಟಿಗೆ ಹಣ ನೀಡಿದ ಆರೋಪದಲ್ಲಿ ಟ್ರಂಪ್‌ರನ್ನು ಮ್ಯಾನ್‌ಹ್ಯಾಟನ್ ನ್ಯಾಯಾಲಯದಲ್ಲಿ ಅಧಿಕಾರಿಗಳಿಗೆ ಶರಣಾಗಿದ್ದಾರೆ.

ನ್ಯೂಯಾರ್ಕ್‌ನ ಗ್ರ್ಯಾಂಡ್ ಜೂರಿ ಅಧ್ಯಕ್ಷರ ವಿರುದ್ಧ ಕ್ರಿಮಿನಲ್ ಕೇಸ್‌ಗೆ ಅನುಮೋದನೆ ದೊರೆತಿದ್ದು, ಈ ಕ್ರಿಮಿನಲ್ ಪ್ರಕರಣ ಸಂಬಂಧಿಸಿದಂತೆ ಟ್ರಂಪ್‌ರನ್ನು ಬಂಧಿಸಲಾಗಿದೆ.

ನ್ಯಾಯಾಲಯದಲ್ಲಿ ಡೊನಾಲ್ಡ್ ಟ್ರಂಪ್ ತಮ್ಮನ್ನು ತಾವು ನಿರಪರಾಧಿ ಎಂದು ಹೇಳಿಕೊಂಡಿದ್ದಾರೆ. ಟ್ರಂಪ್ ಆಗಮಿಸುವ ಮುನ್ನ ನ್ಯಾಯಾಲದಲ್ಲಿ ಬಿಗಿ ಭದ್ರತೆ ಏರ್ಪಡಿಸಲಾಗಿತ್ತು. ಕ್ರಿಮಿನಲ್ ವಿಚಾರಣೆ ಎದುರಿಸುತ್ತಿರುವ ಮೊದಲ ಯುಎಸ್ ಮಾಜಿ ಅಧ್ಯಕ್ಷ ಟ್ರಂಪ್ ಆಗಿದ್ದಾರೆ.

ಸ್ಟ್ರೋಮಿ ಡೇನಿಯಲ್ಸ್‌ಗೆ ಹಣ ನೀಡುವ ಸಂಬಂಧ ಯಾವುದೇ ತಪ್ಪು ಮಾಡಿಲ್ಲ ಎಂದು ಟ್ರಂಪ್ ಹೇಳಿದ್ದಾರೆ. ದಶಕದ ಹಿಂದೆ ಟ್ರಂಪ್ ಜೊತೆಗಿನ ಸಂಬಂಧದ ಬಗ್ಗೆ ಯಾವುದೇ ವಿಷಯವನ್ನು ಬಹಿರಂಗಪಡಿಸದಂತೆ ಡೇನಿಯಲ್ಸ್‌ಗೆ ಹಣ ನೀಡಲಾಗಿದೆ ಎನ್ನಲಾಗಿದೆ. ಈ ಆರೋಪವನ್ನು ಟ್ರಂಪ್ ಒಪ್ಪಿಕೊಂಡಿಲ್ಲ.

 

 

 

 

ಈ ಸುದ್ದಿಯನ್ನು ಇತರರ ಜೊತೆಗೂ ಹಂಚಿಕೊಳ್ಳಿ

LEAVE A REPLY

Please enter your comment!
Please enter your name here

error: Content is protected !!