ಹೊಸದಿಗಂತ ಡಿಜಿಟಲ್ ಡೆಸ್ಕ್ :
ತ್ರಿಪುರಾದಲ್ಲಿ ಕಾಡು ವಿಷಕಾರಿ ಅಣಬೆಗಳನ್ನು ಸೇವಿಸಿ ಮಗು ಸೇರಿದಂತೆ ಒಂದೇ ಕುಟುಂಬದ ಕನಿಷ್ಠ ಐದು ಜನರು ಅಸ್ವಸ್ಥರಾಗಿದ್ದಾರೆ ಎಂದು ಆರೋಗ್ಯ ಅಧಿಕಾರಿಗಳು ಭಾನುವಾರ ತಿಳಿಸಿದ್ದಾರೆ.
ಶನಿವಾರ ರಾತ್ರಿ ಕಾಡು ಅಣಬೆಯನ್ನು ಸೇವಿಸಿದ ನಂತರ ವಾಂತಿ ಮತ್ತು ಹೊಟ್ಟೆನೋವು ಕಾಣಿಸಿಕೊಂಡ ಬುಡಕಟ್ಟು ಕುಟುಂಬದ ಐವರನ್ನು ಆಸ್ಪತ್ರೆಗೆ ದಾಖಲಿಸಲಾಗಿತ್ತು ಎಂದು ಸೆಪಹಿಜಾಲಾ ಜಿಲ್ಲೆಯ ಬಿಶ್ರಾಮ್ಗಂಜ್ ಪ್ರಾಥಮಿಕ ಆರೋಗ್ಯ ಕೇಂದ್ರದ ಸರ್ಕಾರಿ ಆಸ್ಪತ್ರೆಯ ವೈದ್ಯರು ತಿಳಿಸಿದ್ದಾರೆ.
ಪ್ರತಿ ವರ್ಷವೂ ಈಶಾನ್ಯ ರಾಜ್ಯಗಳಲ್ಲಿ ಕಾಡು ಅಣಬೆಗಳನ್ನು ಸೇವಿಸಿದ ನಂತರ ಅನೇಕ ಜನರು, ಹೆಚ್ಚಾಗಿ ಬುಡಕಟ್ಟು ಜನಾಂಗದವರು ಸಾಯುತ್ತಾರೆ ಅಥವಾ ಅನಾರೋಗ್ಯಕ್ಕೆ ಒಳಗಾಗುತ್ತಾರೆ. ಬಳಕೆಗೆ ಅಸುರಕ್ಷಿತವಾಗಿರುವ ಕಾಡು ಅಣಬೆಗಳನ್ನು ಸ್ಥಳೀಯ ಜನರು ಗುರುತಿಸಲು ಸಾಧ್ಯವಿಲ್ಲ. ಕಾಡು ಅಣಬೆ ಸೇವನೆ ವಿರುದ್ಧ ಜನಜಾಗೃತಿ ಅಗತ್ಯ ಎಂದು ಆರೋಗ್ಯಾಧಿಕಾರಿಗಳು ಸೂಚಿಸಿದರು.