ಹೊಸದಿಗಂತ ಡಿಜಿಟಲ್ ಡೆಸ್ಕ್ :
ಸಂಸದೆ , ನಟಿ ಸುಮಲತಾ ಅಂಬರೀಷ್ ಅವರ ಪುತ್ರ, ನಟ ಅಭಿಷೇಕ್- ಅವಿವಾ ಬಿದ್ದಪ್ಪ (Aviva Bidapa) ಮದುವೆ ದಿನಾಂಕ ಫಿಕ್ಸ್ ಆಗಿದೆ. ಈ ಮೂಲಕ ಸುಮಲತಾ ಕುಟುಂಬದಲ್ಲಿ ಸಂತಸ ಮನೆ ಮಾಡಿದೆ.
3-4 ವರ್ಷಗಳ ಡೇಟಿಂಗ್ ನಂತರ ಇತ್ತೀಚಿಗೆ ಈ ಜೋಡಿ ಎಂಗೇಜ್‌ಮೆಂಟ್ ಮಾಡಿಕೊಂಡಿತ್ತು. ಖ್ಯಾತ ಸೆಲೆಬ್ರಿಟಿ ಫ್ಯಾಷನ್ ಡಿಸೈನರ್ ಪ್ರಕಾದ್ ಬಿದ್ದಪ್ಪ ಅವರ ಮಗಳು ಅವಿವಾ ಜೊತೆ ಹಸೆಮಣೆ ಏರಲು ಅಂಬಿ ಪುತ್ರ ಸಜ್ಜಾಗಿದ್ದಾರೆ.
ವಿಧಾನಸಭಾ ಚುನಾವಣೆ ಮುಗಿದ ಬೆನ್ನಲ್ಲೆ ಸ್ಯಾಂಡಲ್‌ವುಡ್ ಸ್ಟಾರ್ ವೆಡ್ಡಿಂಗ್‌ಗೆ ಸಾಕ್ಷಿಯಾಗಲಿದೆ. ನಟ ಅಭಿಷೇಕ್- ಅವಿವಾ ವಿವಾಹ ಇದೇ ಜೂನ್ 9 ಮತ್ತು 10ರಂದು ಬೆಂಗಳೂರಿನ ಅರಮನೆ ಮೈದಾನದಲ್ಲಿ ನಡೆಯಲಿದೆ. ಜೂನ್ 12ರಂದು ಮಂಡ್ಯದಲ್ಲಿ ಆರತಕ್ಷತೆ ಮತ್ತು ಬೀಗರ ಊಟ ಕಾರ್ಯಕ್ರಮ ನಡೆಯಲಿದೆ. ಈ ಸಮಾರಂಭದಲ್ಲಿ ಸುಮಾರು 10 ಸಾವಿರ ಅತಿಥಿಗಳು ಭಾಗಿಯಾವ ಸಾಧ್ಯತೆ ಇದೆ.
ಏಪ್ರಿಲ್ 5ರಂದು ಅಭಿಷೇಕ್ (Abhishek Ambareesh) ಮತ್ತು ಸುಮಲತಾ ಅಂಬರೀಷ್ ದೆಹಲಿಗೆ ತೆರಳಿ ಪ್ರಧಾನಿ ನರೇಂದ್ರ ಮೋದಿಗೆ ಮದುವೆ ಆಮಂತ್ರಣ ಪತ್ರ ನೀಡಿದ್ದರು. ಈ ವಿಷಯವನ್ನು ಅವರು ಸೋಷಿಯಲ್ ಮೀಡಿಯಾ ಮೂಲಕ ಫೋಟೊ ಸಹಿತ ಹಂಚಿಕೊಂಡಿದ್ದರು. ಈ ಮೂಲಕ ಗಣ್ಯರನ್ನು ಆಹ್ವಾನಿಸಲು ಆರಂಭಿಸಿದ್ದರು.