ಹೊಸದಿಗಂತ ಡಿಜಿಟಲ್ ಡೆಸ್ಕ್ :
ಪ್ರಧಾನಿ ಮೋದಿ ಬಂಡೀಪುರದಲ್ಲಿ ಸಫಾರಿ ಮಾಡಿದ್ದೂ, ಈ ಕುರಿತು ಮಾಜಿ ಮುಖ್ಯಮಂತ್ರಿ ಕುಮಾರಸ್ವಾಮಿ (H.D.Kumaraswamy) ವ್ಯಂಗ್ಯವಾಡಿದ್ದಾರೆ.
ಮೋದಿ (Narendra Modi) ಕಾಡು ಪ್ರಾಣಿಗಳನ್ನು ನೋಡಲು ಬಂದ ತಕ್ಷಣ ಜನ ವೋಟು ಒತ್ತಿ ಬಿಡ್ತಾರಾ ಎಂದು ಕೇಳಿದ್ದಾರೆ.
ಸುದ್ದಿಗಾರರೊಂದಿಗೆ ಮಾತನಾಡಿದ ಅವರು, ಕೊರೋನಾ ಸಂಕಷ್ಟದಲ್ಲಿ, ಪ್ರವಾಹದಿಂದ ಜನ ಬೀದಿಗೆ ಬಂದಾಗ ಮೋದಿ ಬರಲಿಲ್ಲ. ಈಗ ಚುನಾವಣೆ ಹೊತ್ತಿನಲ್ಲಿ ಸಫಾರಿಗೆ (Safari) ಬಂದಿದ್ದಾರೆ. ವನ್ಯಜೀವಿಗಳನ್ನು ರಕ್ಷಣೆ ಮಾಡಬೇಕು. ಆದರೆ ವನ್ಯ ಜೀವಿಗಳಿಂದ ಎಷ್ಟು ದಾಳಿ ಆಗಿದೆ ಎಂಬ ಮಾಹಿತಿ ಮೋದಿಯವರಿಗೆ ಇದೆಯೇ? ದಾಳಿಗೊಳಗಾದ ಒಂದು ಕುಟುಂಬಕ್ಕಾದರೂ ಮೋದಿ ಭೇಟಿ ಕೊಟ್ಟಿದ್ದಾರಾ ಎಂದು ಕಿಡಿಕಾರಿದ್ದಾರೆ.
ಅರಣ್ಯ ಪ್ರದೇಶಗಳಲ್ಲಿ ಆಹಾರದ ಕೊರತೆ ಇದೆ ಎಂಬ ವರದಿಯಿದೆ. ಪೌಷ್ಟಿಕಾಂಶಯುಕ್ತ ಆಹಾರದ ಕೊರತೆ ವಿಚಾರವಾಗಿ ಚರ್ಚೆಯಾಗಿದೆ. ಈ ಬಗ್ಗೆ ಮೋದಿಯವರು ಗಮನ ಹರಿಸಿದ್ದಾರಾ? ಕೇವಲ ಸೂಟು ಬೂಟು ಹಾಕಿಕೊಂಡು ಬಂದರೆ ಆಗುತ್ತದೆಯೇ? ನಾಡಿನ ಜನ ಇದನ್ನು ಅರ್ಥ ಮಾಡಿಕೊಳ್ಳಬೇಕು ಎಂದಿದ್ದಾರೆ.