ಹೊಸದಿಗಂತ ಡಿಜಿಟಲ್ ಡೆಸ್ಕ್:
ಪಾಟ್ನಾದಲ್ಲಿ ಇಬ್ಬರು ಕ್ರೈಸ್ತ ಪಾದ್ರಿಗಳ ಮೇಲೆ ಗುಂಪುಹಲ್ಲೆ ನಡೆದಿದೆ.
ಹಿಂದೂ ಸಂಘಟನೆಯ ಕಾರ್ಯಕರ್ತರು ದಾಳಿ ನಡೆಸಿದ್ದಾರೆ ಎಂದು ಆಲಮ್ಗಂಜ್ ಪೊಲೀಸರು ಮಾಹಿತಿ ನೀಡಿದ್ದು, ಏಕಾಏಕಿ ಗುಂಪೊಂದು ಪಾದ್ರಿಗಳ ಮೇಲೆ ದಾಳಿ ನಡೆಸಿದೆ ಎಂದಿದ್ದಾರೆ.
ಮನೆಗೆ ಊಟಕ್ಕೆ ತೆರಳಿದ್ದ ಪಾದ್ರಿಗಳ ಮೇಲೆ ಮಹಿಳೆಯರೂ ಸೇರಿ ಹಲವರು ಥಳಿಸಿದ್ದಾರೆ. ತಕ್ಷಣವೇ ಪೊಲೀಸರು ಪಾದ್ರಿಗಳನ್ನು ಠಾಣೆಗೆ ಕರೆತಂದು ಹೊಡೆದವರನ್ನು ಗುರುತಿಸಿ ಎಂದಿದ್ದಾರೆ. ಆದರೆ ಅದು ಸಾಧ್ಯವಾಗಿಲ್ಲ. ಥಳಿತದಿಂದ ತುಂಬಾ ಹೆದರಿದ್ದ ಪಾದ್ರಿಗಳು ನಮ್ಮನ್ನು ಮೆಘಾಲಯಕ್ಕೆ ಕಳುಹಿಸಿಕೊಡಿ ನಾವು ಯಾವ ದೂರನ್ನೂ ನೀಡುವುದಿಲ್ಲ ಎಂದಿದ್ದಾರೆ.
ಸಿಸಿಟಿವಿ ಆಧರಿಸಿ ದುಷ್ಕರ್ಮಿಗಳನ್ನು ಪೊಲೀಸರು ಗುರುತಿಸುತ್ತಿದ್ದಾರೆ. ಮೆಘಾಲಯ ಪೊಲೀಸರೂ ಸಂಪರ್ಕಿಸಿ ಪಾದ್ರಿಗಳಿಗೆ ಭದ್ರತೆ ನೀಡಿ ಎಂದು ಮನವಿ ಮಾಡಿದ್ದಾರೆ.