ಬಿಹಾರ, ಪಶ್ಚಿಮ ಬಂಗಾಳದಲ್ಲಿ ಕಂಪಿಸಿದ ಭೂಮಿ: ಜನರಲ್ಲಿ ಭಯದ ವಾತಾವರಣ

ಹೊಸದಿಗಂತ ಡಿಜಿಟಲ್‌ ಡೆಸ್ಕ್:‌ 

ಸರಣಿ ಭೂಕಂಪಗಳು ಜನರನ್ನು ಕಂಗಾಲಾಗಿಸಿದೆ. ಕೆಲವು ದಿನಗಳಿಂದ ದೇಶದ ಎಲ್ಲೋ ಒಂದು ಕಡೆ ಭೂಕಂಪ ಸಂಭವಿಸುತ್ತಿದೆ. ಇದೀಗ ಬಿಹಾರ ಮತ್ತು ಪಶ್ಚಿಮ ಬಂಗಾಳ ರಾಜ್ಯಗಳಲ್ಲಿ ಭೂಮಿ ಕಂಪಿಸಿತು. ಬಿಹಾರದ ಅರಾರಿಯಾದಲ್ಲಿ ಬುಧವಾರ ಬೆಳಗ್ಗೆ 5.35ಕ್ಕೆ ಭೂಕಂಪ ಸಂಭವಿಸಿದೆ.

ಭೂಕಂಪನದ ರಾಷ್ಟ್ರೀಯ ಕೇಂದ್ರದ ಪ್ರಕಾರ, ಭೂಕಂಪದ ತೀವ್ರತೆಯು ರಿಕ್ಟರ್ ಮಾಪಕದಲ್ಲಿ 4.3 ಆಗಿತ್ತು. ಭೂಕಂಪದ ಕೇಂದ್ರವು ಪೂರ್ಣಿಯಾ ಬಳಿ ಇತ್ತು. ಭೂಮಿಯೊಳಗೆ 10 ಕಿಲೋಮೀಟರ್ ಆಳದಲ್ಲಿ ಕಂಪನ ಸಂಭವಿಸಿದೆ ಎಂದು ತಿಳಿದುಬಂದಿದೆ. ಆದರೆ, ಭೂಕಂಪದಿಂದ ಆಸ್ತಿ-ಪಾಸ್ತಿ ನಷ್ಟದ ವಿವರ ತಿಳಿದುಬಂದಿಲ್ಲ ಎಂದು ಅಧಿಕಾರಿಗಳು ಹೇಳಿದ್ದಾರೆ.

ಪಶ್ಚಿಮ ಬಂಗಾಳದಲ್ಲೂ ಭೂಕಂಪ ಸಂಭವಿಸಿದೆ ಎಂದು ಎನ್‌ಸಿಎಸ್ ಬಹಿರಂಗಪಡಿಸಿದೆ. ಬುಧವಾರ ಬೆಳಗ್ಗೆ 5.35ಕ್ಕೆ ಸಿಲಿಗುರಿಯಲ್ಲಿ ಭೂಕಂಪ ಸಂಭವಿಸಿದೆ. ಸಿಲಿಗುರಿಯಿಂದ 140 ಕಿ.ಮೀ ದೂರದಲ್ಲಿ ಭೂಕಂಪನದ ಕೇಂದ್ರ ಬಿಂದು ಪತ್ತೆಯಾಗಿದೆ.

ಈ ಸುದ್ದಿಯನ್ನು ಇತರರ ಜೊತೆಗೂ ಹಂಚಿಕೊಳ್ಳಿ

LEAVE A REPLY

Please enter your comment!
Please enter your name here

error: Content is protected !!