MUST READ | ಎಲ್ಲಾ ಗುಣಗಳೂ ಒಬ್ಬರಲ್ಲೇ ಹೇಗೆ ಸಿಗೋಕೆ ಸಾಧ್ಯ? ಎಂದಾದರೂ ಯೋಚಿಸಿದ್ದೀರಾ?

ಪ್ರೀತಿಸಿ ಮದುವೆಯಾದವಳಿಗೆ ನಾಲ್ಕೇ ವರ್ಷಕ್ಕೆ ಗಂಡನ ಉಸಿರಾಟವೂ ಇರಿಟೇಟ್ ಆಗುವಷ್ಟು ಹಿಂಸೆ. ಅವಳು ನೆಟ್ಟಗೆ ಅಡುಗೆ ಮಾಡೋದಿಲ್ಲ, ಐರನ್ ಮಾಡೋಕೆ ಬರೋದಿಲ್ಲ, ಎಲ್ಲಾದಕ್ಕೂ ನನ್ ಮೇಲೆ ಡಿಪೆಂಡ್ ಆಗ್ತಾಳೆ ಎಂದು ಆತ ಹೇಳಿದ್ರೆ, ಇವನಿಗೆ ಒಂದು ಕಾಫಿ ಮಾಡಿಕೊಳ್ಳೋಕೂ ಕಷ್ಟ, ಸರಿಯಾದ ಟೈಮ್‌ಗೆ ಮನೆಗೆ ಬರೋದಿಲ್ಲ. ಒದ್ದೆ ಟವಲ್ ಬೆಡ್ ಮೇಲೆ ಹಾಕ್ತಾನೆ, ಸಾಕ್ಸ್ ತೊಳೆಯದೇ ಹಾಕೋತಾನೆ ಅನ್ನೋದು ಅವಳ ಕಂಪ್ಲೆಂಟ್ಸ್..

ಮನಸ್ಸಿನಲ್ಲಿ ಸಾಕಷ್ಟು ಇಟ್ಟುಕೊಂಡು ಇಬ್ಬರು ದೈನಂದಿನ ಕೆಲಸಗಳನ್ನು ಮಾಡುತ್ತಲೇ ಇದ್ದರು. ಹೀಗೆ ಗಂಡನ ಮೇಲೆ ಮುನಿಸಿಕೊಂಡು ಡ್ರಾಪ್ ಮಾಡೋದು ಬೇಡ ನಾನ್ ಬಸ್‌ನಲ್ಲೇ ಹೋಗ್ತೇನೆ ಎಂದು ಬಸ್ ಹತ್ತಿದ್ಲು. ಅವಳ ಆಫೀಸ್ ಬರೋದಕ್ಕೆ ಏನಿಲ್ಲಾ ಅಂದ್ರೂ ಒಂದು ಗಂಟೆ. ಅಮ್ಮನಿಗೆ ಫೋನ್ ಮಾಡಿ, ಇವತ್ತು ಗಂಡ ಏನೆಲ್ಲಾ ಮಾಡಿದ ಎಂದು ಮನಸ್ಫೂರ್ತಿ ಬೈದಳು. ಪಕ್ಕದಲ್ಲೇ ಕುಳಿತಿದ್ದ ವ್ಯಕ್ತಿಯೊಬ್ಬರು ಪ್ರತಿಯೊಂದನ್ನು ಕೇಳಿಸಿಕೊಂಡ್ರು.

ನೋಡೋಕೆ ಅತೀ ಒಳ್ಳೆಯವರಂತೆ, ಫ್ರೆಂಡ್ಲಿಯಾಗಿ ಕಾಣುತ್ತಿದ್ರು. ಬಿಳಿ ಬಟ್ಟೆ, ಕನ್ನಡಕ, ಅಲ್ಪ ಸ್ವಲ್ಪ ಬಿಳಿ ಗಡ್ಡ, ಹಣೆಯಲ್ಲಿ ಕುಂಕುಮ. ಒಟ್ಟಾರೆ ನಂಬುವಂಥ ಕ್ಯಾರೆಕ್ಟರ್. ಗಂಡನಿಂದ ಏನು ಬೇಕು ಎಂದು ಅವರಿಗೆ ನೇರವಾಗಿ ಹೇಳಿನೋಡಮ್ಮ ಅಂದ್ರು. ಅರ್ಧಂಬರ್ಧ ಸ್ಮೈಲ್‌ನಲ್ಲಿಯೇ ಹೇಳಿದ್ದೆಲ್ಲಾ ಆಯ್ತು ಅಂಕಲ್, ನನ್ ಫ್ರೆಂಡ್ಸ್ ಜತೆ ಎಷ್ಟ್ ಈಸಿ ಜೀವನ, ಸಂಬಂಧ ಅಂತ ಬಂದ ತಕ್ಷಣ ಎಲ್ಲವೂ ಕಾಂಪ್ಲೆಕ್ಸ್ ಆಗಿ ಹೋಗತ್ತೆ ಎಂದಳು.

ನಿಂಗೆ ದುಃಖ ಅಂದ ತಕ್ಷಣ ಯಾರಿಗೆ ಕರೆ ಮಾಡ್ತೀಯಾ?
ಅಮ್ಮ
ನಿಂಗೆ ಖುಷಿ ವಿಷಯ ಅಂದ ತಕ್ಷಣ ಯಾರಿಗೆ ಕರೆ ಮಾಡ್ತೀಯಾ?
ಅಪ್ಪ, ಅಕ್ಕ
ಗಾಸಿಪ್ ಮಾಡೋಕೆ ಯಾರು ಬೆಸ್ಟ್?
ನನ್ನ ಸ್ಕೂಲ್ ಫ್ರೆಂಡ್ ಸ್ವಾತಿ
ತಿನ್ನೋದಕ್ಕೆ ಹೋಗ್ಬೇಕು ಅಂದಾಗ ಯಾರನ್ನು ಕರೀತಿಯಾ?
ನನ್ನ ಬೆಸ್ಟ್ ಫ್ರೆಂಡ್ ಪ್ರೀತಮ್
ಹಾಗೇ ಶಾಪಿಂಗ್ ಪಾರ್ಟ್‌ನರ್?
ಅದಕ್ಕೆ ಪುಟಾಣಿ ಗ್ರೂಪ್ ಇದೇ ಎಂದಳು…

ಶಾಪಿಂಗ್ ಮಾಡೋರ ಜತೆ ಕಷ್ಟ ಹಂಚಿಕೊಳ್ಳೋದಕ್ಕೆ ಆಗೋದಿಲ್ಲ, ಕಷ್ಟ ಹಂಚಿಕೊಳ್ಳೋರ ಜತೆ ಗಾಸಿಪ್ ಮಾಡೋದಕ್ಕೆ ಆಗೋದಿಲ್ಲ, ಸ್ವಾತಿ ಜತೆ ಬೆಸ್ಟ್ ಗಾಸಿಪ್ ಮಾಡ್ತ್ಯಾ ಆದರೆ ಬೇರೆ ಯಾವ ವಿಷಯದ ಬಗ್ಗೆ ಅವಳ ಜತೆ ಮಾತನಾಡೋ ಅಷ್ಟು ಕಂಫರ್ಟ್ ಇಲ್ಲ. ತಿನ್ನೋಕೆ ಪ್ರೀತಂ ಜೊತೆ ಹೋಗ್ತೀಯಾ ಆದರೆ ಆತನ ಜತೆ ಶಾಪಿಂಗ್ ಮಾಡೋದಕ್ಕೆ ಆಗೋದಿಲ್ಲ…

ಒಂದೊಂದು ವಿಷಯಕ್ಕೆ ಒಬ್ಬೊಬ್ಬರಿಗೆ ಮಾನ್ಯತೆ ಕೊಡುವಾಗ ಪ್ರತಿ ವಿಷಯವನ್ನು ಗಂಡನೇ ಮಾಡಲಿ ಅಂತ ನಿರೀಕ್ಷೆ ಮಾಡೋದ್ಯಾಕೆ? ಅವರೂ ವ್ಯಕ್ತಿ ಅಷ್ಟೆ ಅಲ್ವಾ?

 

ಈ ಸುದ್ದಿಯನ್ನು ಇತರರ ಜೊತೆಗೂ ಹಂಚಿಕೊಳ್ಳಿ

LEAVE A REPLY

Please enter your comment!
Please enter your name here

error: Content is protected !!