ಹೊಸದಿಗಂತ ಡಿಜಿಟಲ್ ಡೆಸ್ಕ್:
ರಾಜ್ಯ ವಿಧಾನಸಭೆ ಚುನಾಔಣೆ ಹಿನ್ನೆಲೆ ಬಿಜೆಪಿ ಅಭ್ಯರ್ಥಿಗಳ ಪರ ಪ್ರಚಾರಕ್ಕಾಗಿ ಪ್ರಧಾನಿ ಮೋದಿಯವರು ಬೀದರ್ಗೆ ಬಂದಿಳಿದಿದ್ದಾರೆ.ಮೋದಿಯವರು ನವದೆಹಲಿಯಿಂದ ವಿಶೇಷ ವಿಮಾನದ ಮೂಲಕ ಬೀದರ್ ಏರ್ಬೇಸ್ಗೆ ಆಗಮಿಸಿ ಅಲ್ಲಿಂದ ಹುಮ್ನಾಬಾದ್ ಹೆಲಿಪ್ಯಾಡ್ಗೆ ಬಂದಿಳಿದರು. ಬಳಿಕ ರಸ್ತೆ ಮಾರ್ಗವಾಗಿ ಹುಮ್ನಾಬಾದ್ ತಾಲೂಕಿನ ಚಿನಕೇರಾ ಕ್ರಾಸ್ ಬಳಿ ಬಿಜೆಪಿ ಬೃಹತ್ ಸಮಾವೇಶ ವೇದಿಕೆಗೆ ಆಗಮಿಸಿದರು.
ಇಲ್ಲಿ ನಡೆಯುತ್ತಿರುವ ಬೃಹತ್ ಸಾರ್ವಜನಿಕ ಸಮಾವೇಶದಲ್ಲಿ ಪ್ರಧಾನಿ ಮೋದಿ ಭಾಗಿಯಾದರು. ಮೋದಿಗೆ ಹೂವಿನ ಹಾರ ಪೇಟ ತೊಡಿಸಿ ಬಸವಣ್ಣರ ಫೋಟೋ ನೀಡಿ ಸ್ವಾಗತಿಸಲಾಯಿತು.