18 ಸಮಾವೇಶ, 6 ರೋಡ್‌ ಶೋಗಳು: ಪ್ರಧಾನಿ ಮೋದಿ ಮೆಗಾ ಪ್ರಚಾರ ಪೂರ್ಣ!

ಹೊಸದಿಗಂತ ಡಿಜಿಟಲ್‌ ಡೆಸ್ಕ್:‌  

ಕರ್ನಾಟಕ ವಿಚುನಾವಣೆ ಅಖಾಡಕ್ಕೆ ಖುದ್ದು ಇಳಿದಿರುವ ಪ್ರಧಾನಿ ನರೇಂದ್ರ ಮೋದಿ ಅವರು ಕಳೆದ ಒಂಭತ್ತು ದಿನಗಳಲ್ಲಿ 18 ಬೃಹತ್‌ ಸಮಾವೇಶ ಹಾಗೂ 6 ರೋಡ್‌ ಶೋಗಳ ಮೂಲಕ ಚುನಾವಣಾ ಪ್ರಚಾರವನ್ನು ಮಾಡಿದರು.

ರಾಜ್ಯದಲ್ಲಿ ಮತ್ತೊಮ್ಮೆ ಬಿಜೆಪಿ ಸರ್ಕಾರವನ್ನು ಅಧಿಕಾರಕ್ಕೆ ತರಬೇಕು ಎನ್ನುವ ಉದ್ದೇಶದಿಂದ ಪ್ರಧಾನಿ ಮೋದಿ (Prime minister Narendra Modi tour in Karnataka) ರಾಜ್ಯದ ಉದ್ದಗಲಕ್ಕೂ ಸುತ್ತಾಡಿ ಬಿಜೆಪಿ ಅಭ್ಯರ್ಥಿ ಪರ ಮತಯಾಚಿಸಿದರು.

ಏಪ್ರಿಲ್‌ 2 9ರಂದು ಪ್ರಧಾನಿಮೋದಿ ಅವರು ತಮ್ಮ ಪ್ರಚಾರವನ್ನು ಆರಂಭಿಸಿ ಮೇ 7ರವರೆಗೆ ಪ್ರಚಾರ ಕಾರ್ಯಕ್ರಮದಲ್ಲಿ ಭಾಗಿಯಾಗಿದ್ದಾರೆ. ಈ ಒಂಭತ್ತು ದಿನಗಳಲ್ಲಿ 18 ಸಮಾವೇಶ (18 Convention) 6 ರೋಡ್‌ ಶೋಗಳನ್ನು (6 Road Show) ನಡೆಸಿದ್ದಾರೆ.

ಮೊದಲ ಸಮಾವೇಶವನ್ನು ಹುಮ್ನಾಬಾದ್‌ನಲ್ಲಿ (Humnabad) ರೋಡ್‌ ಶೋ ಆರಂಭಿಸಿ, ಕೊನೆಯ ದಿನ ನಂಜನಗೂಡಿನಲ್ಲಿ (Nanjanagudu) ಬಹಿರಂಗ ಪ್ರಚಾರವನ್ನು ಪೂರ್ಣಗೊಳಿಸಿದ್ದಾರೆ.

ಅದ್ರಲ್ಲೂ ಬೆಂಗಳೂರಿನಲ್ಲಿ ನಡೆದ ಮೂರು ರೋಡ್‌ ಶೋಗಳು ಭಾರಿ ಸಂಚಲನ ಸೃಷ್ಟಿಸಿದವು. ಅವರು 40 ಕಿ.ಮೀ.ಗಳಿಗಿಂತಲೂ ಹೆಚ್ಚು ದೂರ ರೋಡ್‌ ಶೋ ನಡೆಸಿದರು. ಬಹುತೇಕ ಎಲ್ಲ ಕ್ಷೇತ್ರಗಳನ್ನು ಕನೆಕ್ಟ್‌ ಮಾಡಿದರು. ಬೆಂಗಳೂರಿನ 26.5 ಕಿ.ಮೀ. ಅಂತರದ ಯಾತ್ರೆ ಒಂದು ದಾಖಲೆಯನ್ನೇ ಬರೆಯಿತು.

ಎಲ್ಲೆಲ್ಲಿ, ಯಾವಾಗ, ಸಮಾವೇಶ, ರೋಡ್‌ ಶೋ?

ಏಪ್ರಿಲ್‌ 29: ಹುಮನಾಬಾದ್‌, ವಿಜಯಪುರ, ಕುಡಚಿಯಲ್ಲಿ ಸಮಾವೇಶ, ಬೆಂಗಳೂರು ಉತ್ತರದಲ್ಲಿ ರೋಡ್‌ ಶೋ
ಏಪ್ರಿಲ್‌ 30: ಕೋಲಾರ, ಚನ್ನಪಟ್ಟಣ, ಬೇಲೂರಿನಲ್ಲಿ ಸಮಾವೇಶ ಮತ್ತು ಮೈಸೂರಿನಲ್ಲಿ ರೋಡ್‌ ಶೋ
ಮೇ 02: ಚಿತ್ರದುರ್ಗ, ವಿಜಯನಗರ, ಸಿಂಧನೂರಿನಲ್ಲಿ ಸಮಾವೇಶ ಮತ್ತು ಕಲಬುರಗಿಯಲ್ಲಿ ರೋಡ್‌ ಶೋ
ಮೇ 03: ಮೂಲ್ಕಿ, ಅಂಕೋಲಾ ಮತ್ತು ಕಿತ್ತೂರಿನಲ್ಲಿ ಸಮಾವೇಶ
ಮೇ 05: ಕಲಬುರಗಿ ಮತ್ತು ತುಮಕೂರಿನಲ್ಲಿ ಸಮಾವೇಶ, ರೋಡ್‌ ಶೋ
ಮೇ 06: ಬೆಂಗಳೂರಿನಲ್ಲಿ 26.5 ಕಿ.ಮೀ. ರೋಡ್‌ ಶೋ, ಬಳಿಕ ಬಾದಾಮಿ ಮತ್ತು ಹಾವೇರಿಯಲ್ಲಿ ಸಮಾವೇಶ
ಮೇ 07: ಬೆಂಗಳೂರಿನಲ್ಲಿ 06 ಕಿ.ಮೀ. ರೋಡ್‌ ಶೋ, ಶಿವಮೊಗ್ಗ ಮತ್ತು ನಂಜನಗೂಡಿನಲ್ಲಿ ಬೃಹತ್‌ ಸಮಾವೇಶ
ಒಟ್ಟು 18 ಸಮಾವೇಶಗಳು, 6 ರೋಡ್‌ ಶೋಗಳು

ಪ್ರಧಾನಿ ಮೋದಿ ಬೆಳಗಾವಿ, ಹುಬ್ಬಳ್ಳಿ ಧಾರವಾಡ, ರಾಯಚೂರು, ಬಳ್ಳಾರಿ, ಕೊಪ್ಪಳ, ಚಿತ್ರದುರ್ಗ, ದಾವಣಗೆರೆ, ಹಾವೇರಿ, ಶಿವಮೊಗ್ಗ, ಮಂಗಳೂರು, ಮೈಸೂರು, ಕೋಲಾರ, ಬೆಂಗಳೂರು, ಮಂಡ್ಯ, ರಾಮನಗರ, ತುಮಕೂರು, ಬಾಗಲಕೋಟೆ, ಬಿಜಾಪುರ ಜಿಲ್ಲೆಗಳಲ್ಲಿ ಬೃಹತ್ ಸಮಾವೇಶ ನಡೆಸಿದ್ದಾರೆ .

ಪ್ರಧಾನಿ ಮೋದಿ ಮಾತ್ರವಲ್ಲದೇ , ಅವರ ಹಾದಿಯಾಗಿ, ಕೇಂದ್ರ ಸಚಿವರಾದ ಅಮಿತ್ ಶಾ (Amit Shah), ಸ್ಮೃತಿ ಇರಾನಿ (Smriti Irani), ರಾಜನಾಥ್‌ ಸಿಂಗ್ (Rajanath Sigh), ಉತ್ತರ ಪ್ರದೇಶ ಮುಖ್ಯಮಂತ್ರಿ ಯೋಗಿ ಆದಿತ್ಯನಾಥ (UP CM Yogi adityanath), ಮಹಾರಾಷ್ಟ್ರ ಉಪಮುಖ್ಯಮಂತ್ರಿ ದೇವೇಂದ್ರ ಫಡ್ನವೀಸ್‌ (Devendra Fadnavis), ಬಿಜೆಪಿ ರಾಷ್ಟ್ರೀಯ ಅಧ್ಯಕ್ಷ ಜೆ.ಪಿ. ನಡ್ಡಾ (JP Nadda) ಸೇರಿದಂತೆ ಹಲವು ನಾಯಕರು ರಾಜ್ಯದಲ್ಲಿ ಪ್ರಚಾರವನ್ನು ಮಾಡಿದ್ದಾರೆ.

ಈ ಸುದ್ದಿಯನ್ನು ಇತರರ ಜೊತೆಗೂ ಹಂಚಿಕೊಳ್ಳಿ

LEAVE A REPLY

Please enter your comment!
Please enter your name here

error: Content is protected !!