ಹೊಸದಿಗಂತ ಡಿಜಿಟಲ್ ಡೆಸ್ಕ್:
ಅಂತಾರಾಷ್ಟ್ರೀಯ ಮಟ್ಟದಲ್ಲಿ ಗುರುತಿಸಿಕೊಂಡಿರುವ ಬೆಂಗಳೂರು ಅನೇಕರ ಅಚ್ಚುಮೆಚ್ಚಿನ ನಗರ. ಈಗಾಗಲೇ ಹಲವು ಕಾರಣಗಳಿಂದ ಪ್ರಮುಖ ನಗರಗಳಲ್ಲಿ ಬೆಸ್ಟ್ ಸಿಟಿಯಾಗಿ ರೂಪುಗೊಂಡಿರುವ ಬೆಂಗಳೂರು ನಗರಕ್ಕೆ ಇದೀಗ ಮತ್ತೊಂದು ಗರಿ ಮೂಡಿದೆ. ದೇಶದ ಅತ್ಯುತ್ತಮ ಶಾಪಿಂಗ್ ಸ್ಟ್ರೀಟ್ನಲ್ಲಿ ಬೆಂಗಳೂರಿನ ನಾಲ್ಕು ರಸ್ತೆಗಳು ಮೊದಲ ಹತ್ತು ಪಟ್ಟಿಯಲ್ಲಿ ಸ್ಥಾನ ಪಡೆದಿದ್ದು, ಎಂಜಿ ರೋಡ್ ಮೊದಲ ಸ್ಥಾನದಲ್ಲಿದೆ.
ಉನ್ನತ ರಸ್ತೆಗಳಲ್ಲಿ ಗ್ರಾಹಕರಿಗೆ ಅತ್ಯುತ್ತಮ ಶಾಪಿಂಗ್ ಅನುಭವ ನೀಡುವ ಗುಣಮಟ್ಟ ನಿರ್ಧರಿಸುವ ಕುರಿತು ರಿಯಲ್ ಎಸ್ಟೇಟ್ ಕನ್ಸಲ್ಟೆಂಟ್ ನೈಟ್ ಫ್ರಾಂಕ್ ಇಂಡಿಯಾ ಸಂಸ್ಥೆ ಈ ಪಟ್ಟಿ ಬಿಡುಗಡೆ ಮಾಡಿದೆ. ಇದರಲ್ಲಿ ದೇಶದ ಅತ್ಯುತ್ತಮವಾದ ಹೈ ಸ್ಟ್ರೀಟ್ಗಳ ಪಟ್ಟಿ ಮಾಡಲಾಗಿದೆ. ಅದರಲ್ಲಿ ಬೆಂಗಳೂರಿನ ಎಂಜಿ ರೋಡ್ ಪ್ರಥಮ ಸ್ಥಾನ ಪಡೆದಿದೆ.
“ಥಿಂಕ್ ಇಂಡಿಯಾ: ಥಿಂಕ್ ರಿಟೇಲ್ 2023- ಹೈ ಸ್ಟ್ರೀಟ್ ರಿಯಲ್ ಎಸ್ಟೇಟ್ ಔಟ್ಲುಕ್’ ಎನ್ನುವ ಶೀರ್ಷಿಕೆಯೊಂದಿಗೆ, ಭಾರತದ 8 ಪ್ರಮುಖ ಮಾರುಕಟ್ಟೆಗಳಲ್ಲಿನ ಪ್ರಖ್ಯಾತ 30 ಶಾಪಿಂಗ್ ಸ್ಟ್ರೀಟ್ಗಳನ್ನು ಈ ಸಂಸ್ಥೆ ಪಟ್ಟಿ ಮಾಡಿತ್ತು. ಗ್ರಾಹಕರ ಶಾಪಿಂಗ್ ಅನುಭವಗಳನ್ನು ಆಧರಿಸಿ ಈ ಸಮೀಕ್ಷೆ ಮಾಡಲಾಗಿದೆ. ಅದರ ಪ್ರಕಾರ, ಮೊದಲ ಸ್ಥಾನದಲ್ಲಿ ಎಂಜಿ ರೋಡ್ ಇದ್ದರೆ, 2ನೇ ಸ್ಥಾನದಲ್ಲಿ ಹೈದರಾಬಾದ್ನ ಸೋಮಾಜಿಗುಡ ರಸ್ತೆ, 3ನೇ ಸ್ಥಾನದಲ್ಲಿ ಮುಂಬೈನ ಲಿಂಕಿಂಗ್ ರೋಡ್ ಹಾಗೂ 4ನೇ ಸ್ಥಾನದಲ್ಲಿ ದೆಹಲಿಯ ಸೌತ್ ಎಕ್ಸ್ಟೆನ್ಷನ್ ರಸ್ತೆ ಸ್ಥಾನ ಪಡೆದುಕೊಂಡಿವೆ.