ಮೊಬೈಲ್‌ ಹೆಚ್ಚು ಬಳಸಬೇಡ ಎಂದು ಗದರಿಸಿದ ಅಪ್ಪ: ಬೇಸರಗೊಂಡ ಮಗಳು ಆತ್ಮಹತ್ಯೆ!

ಹೊಸದಿಗಂತ ಡಿಜಿಟಲ್‌ ಡೆಸ್ಕ್:‌

ಮೊಬೈಲ್‌ ನಲ್ಲಿ ಹೆಚ್ಚು ಸಮಯ ಕಳೆಯುತ್ತಿದ್ದುದರಿಂದ ಮಗಳಿಗೆ ತಂದೆ ಗದರಿಸಿದ ಹಿನ್ನೆಲೆ ಬೇಸರಗೊಂಡ ಮಗಳು ಆತ್ಮಹತ್ಯೆ ಮಾಡಿಕೊಂಡ ಘಟನೆ ಪುಣೆ ಜಿಲ್ಲೆಯ ಘೋಡೆಗಾಂವ್ ನಲ್ಲಿ ನಡೆದಿದೆ.

ಮಗಳು ಯಾವಾಗಲೂ ಮೊಬೈಲ್‌ ನಲ್ಲೇ ದಿನ ಕಳೆಯುವುದನ್ನು ನೋಡಿದ ತಂದೆ, ಓದುವ ಬದಲು ಇಡೀ ದಿನ ಮೊಬೈಲ್‌ ಅನ್ನೇ ಬಳಸುತ್ತಿದ್ದೀಯಾ ಎಂದು ಗದರಿಸಿದ್ದಾರೆ. ಇದರಿಂದ ಬೇಸರಗೊಂಡ ಮಗಳು ಮನೆಯ ಟೆರೆಸ್ ನಿಂದ ಕೆಳಗೆ ಹಾರಿ ಆತ್ಮಹತ್ಯೆಗೆ ಶರಣಾಗಿದ್ದಾಳೆ.

ಈ ಘಟನೆ ತಿಳಿದ ಕೂಡಲೇ ಆಸ್ಪತ್ರೆಗೆ ದಾಖಲು ಮಾಡಿದ್ದಾರೆ. ಆದರೆ ಯುವತಿ ಆದಾಗಲೇ ಮೃತಪಟ್ಟಿದ್ದಾಳೆ ಎಂದು ವೈದ್ಯರು ತಿಳಿಸಿದ್ದಾರೆ.

ಘೋಡೆಗಾಂವ್ ಪೊಲೀಸ್ ಠಾಣೆಯಲ್ಲಿ ಆಕಸ್ಮಿಕ ಸಾವು ಪ್ರಕರಣ ಎಂದು ಪೊಲೀಸರು ದಾಖಲಿಸಿದ್ದಾರೆ. ಬಾಲಕಿಯ ಶವವನ್ನು ಮರಣೋತ್ತರ ಪರೀಕ್ಷೆಗೆ ಕಳುಹಿಸಲಾಗಿದೆ.

ಈ ಸುದ್ದಿಯನ್ನು ಇತರರ ಜೊತೆಗೂ ಹಂಚಿಕೊಳ್ಳಿ

LEAVE A REPLY

Please enter your comment!
Please enter your name here

error: Content is protected !!