ಹೊಸದಿಗಂತ ಡಿಜಿಟಲ್ ಡೆಸ್ಕ್:
ಕಾಂಗ್ರೆಸ್‌ನಲ್ಲಿ ಹೇಳಿದ್ದೊಂದು ಮಾಡಿದ್ದೊಂದು ಎನ್ನುವ ಮಾತು ಎನ್ನುವುದೇ ಇಲ್ಲ, ನಾವು ಎಲ್ಲ ಐದು ಗ್ಯಾರೆಂಟಿಯನ್ನು ಜಾರಿ ಮಾಡುತ್ತೇವೆ ಎಂದು ಎಐಸಿಸಿ ಅಧ್ಯಕ್ಷ ಮಲ್ಲಿಕಾರ್ಜುನ ಖರ್ಗೆ ಹೇಳಿದ್ದಾರೆ.
ಈ ಹಿಂದೆ ನಮ್ಮ ಸರ್ಕಾರ ಅಧಿಕಾರದಲ್ಲಿದ್ದಾಗ ಏನು ಹೇಳಿದ್ದೆವೋ ಅದನ್ನೆಲ್ಲಾ ಮಾಡಿದ್ದೇವೆ, ಅಭಿವೃದ್ಧಿ ಕೆಲಸವೇ ನಮ್ಮ ಧ್ಯೇಯ. ನಮ್ಮ ಸರ್ಕಾರ ಬಡವರ ಪರವಾಗಿದೆ. ಎಲ್ಲರನ್ನೂ ಒಟ್ಟಿಗೇ ಪ್ರಗತಿಯತ್ತ ಕೊಂಡೊಯ್ಯುವ ದೃಢ ಸಂಕಲ್ಪ ಮಾಡಿದ್ದೇವೆ ಎಂದು ಹೇಳಿದ್ದಾರೆ.