ಪೆಟ್ರೋಲ್ ಬಂಕ್‌ನಲ್ಲಿ ಎಷ್ಟು ಕಾಳಜಿ ವಹಿಸಿದ್ರೂ ಕಡಿಮೆಯೇ, ಬೆಂಕಿ ಹೊತ್ತಿ ಯುವತಿ ಸಾವು

ಹೊಸದಿಗಂತ ಡಿಜಿಟಲ್ ಡೆಸ್ಕ್:

ತುಮಕೂರಿನ ಪೆಟ್ರೋಲ್ ಬಂಕ್ ಒಂದರಲ್ಲಿ ಕ್ಯಾನ್‌ಗೆ ಪೆಟ್ರೋಲ್ ತುಂಬಿಸಲು ಬಂದಿದ್ದ ಯುವತಿ ಬೆಂಕಿ ಹೊತ್ತಿ ಮೃತಪಟ್ಟಿದ್ದಾಳೆ.

ಮಧುಗಿರಿಯ ಬಡವನಹಳ್ಳಿಯ 18 ವರ್ಷದ ಭವ್ಯ ಹಾಗೂ ತಾಯಿ ಪೆಟ್ರೋಲ್ ಕ್ಯಾನ್ ತುಂಬಿಸಲು ಬಂಕ್‌ಗೆ ಬಂದಿದ್ದಾರೆ. ಈ ವೇಳೆ ಪೆಟ್ರೋಲ್ ಬಂಕ್‌ನಲ್ಲಿ ಬೆಂಕಿ ಹತ್ತಿದೆ, ಗಾಬರಿ ಬಿದ್ದ ಮಗಳು ಓಡಿಹೋಗಲು ಯತ್ನಿಸಿದ್ದು, ಪೆಟ್ರೋಲ್ ಆಕೆ ಹಾಗೂ ತಾಯಿಯ ಮೇಲೆ ಬಿದ್ದಿದೆ.

ಇದರಿಂದಾಗಿ ತಾಯಿ ಗಂಭೀರವಾಗಿ ಗಾಯಗೊಂಡಿದ್ದು, ಮಗಳು ಮೃತಪಟ್ಟಿದ್ದಾಳೆ. ಸ್ಥಳೀಯರು ತಕ್ಷಣವೇ ಬೆಂಕಿ ನಂದಿಸಿದ್ದಾರೆ. ಆದರೂ ಮಗಳು ಮೃತಪಟ್ಟಿದ್ದು, ತಾಯಿ ಗಂಭೀರವಾಗಿ ಗಾಯಗೊಂಡಿದ್ದಾರೆ. ತಾಯಿಯನ್ನು ಆಸ್ಪತ್ರೆಗೆ ದಾಖಲಿಸಲಾಗಿದೆ.

ಈ ಸುದ್ದಿಯನ್ನು ಇತರರ ಜೊತೆಗೂ ಹಂಚಿಕೊಳ್ಳಿ

LEAVE A REPLY

Please enter your comment!
Please enter your name here

error: Content is protected !!